
ಬೆಳಗಾವಿ, ನವೆಂಬರ್ 01: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮುಗಿಲು ಮುಟ್ಟಿದೆ!
ಬೆಳಗಾವಿ ಅಷ್ಟೇ ಅಲ್ಲದೇ ರಾಜ್ಯದ ಮೂಲೆ ಮೂಲೆಗಳಿಂದಲೂ ಕನ್ನಡಿಗರು ಬೆಳಗಾವಿಲ್ಲಿ ರಾಜ್ಯೋತ್ಸವಕ್ಕೆ ಆಗಮಿಸುವುದು ವಿಶೇಷ! ಚೆನ್ನಮ್ಮ ವೃತ್ತದಲ್ಲಿ ಲಕ್ಷಾಂತರ ಕನ್ನಡ ಮನಸುಗಳು ಒಟ್ಟಾಗಿ ರಾಜ್ಯತ್ಸವವನ್ನು ವಿಜೃಂಭನೆಯಿಂದ ಆಚರಿಸುತ್ತಿವೆ. ಕನ್ನಡ ಬಾವುಟಗಳು ಅಗಸದ ಎತ್ತರಕ್ಕೆ ರಾರಾಜಿಸುತ್ತಿವೆ!

ಕನ್ನಡ ಕನ್ನಡ ಆಹಾ ಸವಿಗನ್ನಡ, ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಯಾರಪ್ಪದು ಏನೈತಿ, ಬೆಳಗಾವಿ ನಮ್ಮದೈತಿ ಅನ್ನುವ ಜಯಘೋಷಣೆಗಳು ಮೊಳಗುತ್ತಿವೆ!