spot_img
Thursday, April 17, 2025
spot_imgspot_imgspot_imgspot_img
spot_img

Top 5 This Week

spot_img

Related Posts

ಬೆಳಗಾವಿಯಲ್ಲಿ ಮತ್ತೇ ಮರಾಠಿ ಪುಂಡರ ದರ್ಪ! ಇನ್ನೆಷ್ಟು ಕನ್ನಡಿಗರ ಮೇಲೆ ಹಲ್ಲೆ? ಯಾವಾಗ ಕನ್ನಡಿಗರಿಗೆ ನಿರ್ಭೀತಿ?

ಬೆಳಗಾವಿ, ಫೆಬ್ರವರಿ 22: ಸರ್ಕಾರಿ ಬಸ್‌ ಕಂಡಕ್ಟರ್ (Conductor) ಮೇಲೆ ಮರಾಠಿ ಯುವಕರಿಂದ ಗೂಂಡಾಗಿರಿ ಮಾಡಿದ್ದು, ಕನ್ನಡದಲ್ಲಿ ಮಾತನಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಬೆಳಗಾವಿ ತಾಲೂಕಿನ ಸುಳೇಬಾವಿ, ಬಾಳೇಕುಂದ್ರಿ ಗ್ರಾಮ ಮಧ್ಯೆ ಗಲಾಟೆ ನಡೆದಿದೆ. ಮಹದೇವ ಹಲ್ಲೆಗೊಳಗಾದ ಸರ್ಕಾರಿ ಬಸ್‌ ಕಂಡಕ್ಟರ್. ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಯುವತಿ ಮರಾಠಿಯಲ್ಲಿ ಕೇಳಿದ್ದಾಳೆ. ಯುವತಿ ಜೊತೆ ಯುವಕ ಪ್ರಯಾಣ ಮಾಡುತ್ತಿದ್ದರಿಂದ 2 ಟಿಕೆಟ್ ಕೇಳಿದ್ದಳು. ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕಂಡಕ್ಟರ್ ಮಹದೇವ ಹೇಳಿದ್ದಾರೆ.

ಇಷ್ಟಕ್ಕೆ ಜನರನ್ನು ಕರೆಸಿ ಚಲಿಸುತ್ತಿರುವ ಬಸ್ ನಿಲ್ಲಿಸಿ ಕಂಡಕ್ಟರ್ಗೆ ಹಲ್ಲೆ ಮಾಡಲಾಗಿದೆ. ಸದ್ಯ ಹಲ್ಲೆಗೊಳಗಾದ ಬಸ್‌ ಕಂಡಕ್ಟರ್‌ಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಸಿಪಿ ರೋಹನ್ ಜಗದೀಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕಂಡಕ್ಟರ್‌ನಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಹೊರವಲಯದಲ್ಲಿ ಮಟ್ಕಾ ಅಡ್ಡೆ ಮೇಲೆ ದಾಳಿ ನಡೆಸಿ 10 ಜನರನ್ನು ಪೊಲೀಸರು ಬಂಧಿಸಲಾಗಿದೆ. ಬಂಧಿತರ ಬಳಿ ಇದ್ದ 1.20 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಬಂಧಿತರು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ ಮಾಡಿ ಮಟ್ಕಾ ಅಡ್ಡೆಯ ಮೇಲೆ ರಾತ್ರೋರಾತ್ರಿ ದಾಳಿ ಮಾಡಿದ್ದಾರೆ. ಜಮೀನಿನಲ್ಲಿ ಶೆಡ್ ನಿರ್ಮಿಸಿದ್ದ ಗ್ಯಾಂಗ್ ಐದು ಟೇಬಲ್ ಹಾಕಿ ಮಟ್ಕಾ ಬರೆದುಕೊಳ್ಳುತ್ತಿದ್ದರು. ಮಟ್ಕಾ ಬರೆದುಕೊಳ್ಳುವಾಗಲೇ ಪೊಲೀಸರು ದಾಳಿ ಮಾಡಿ ಹತ್ತು ಜನರನ್ನು ಬಂಧಿಸಿದ್ದಾರೆ.

कोई जवाब दें

कृपया अपनी टिप्पणी दर्ज करें!
कृपया अपना नाम यहाँ दर्ज करें

Popular Articles