ಬೆಳಗಾವಿ, ಜನವರಿ 23: ನಾಲ್ಕು ವರ್ಷದ ಮಗಳಿಗೆ ಚಿತ್ರಹಿಂಸೆ ನೀಡಿ, ಕೊಲೆ ಮಾಡಿದ ಆರೋಪದ ಮೇಲೆ ಬಾಲಕಿಯ ಮಲತಾಯಿಯನ್ನು ಬೆಳಗಾವಿ ಎಪಿಎಂಸಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಮಗುವಿನ ಕೊಲೆ ಪ್ರಕರಣ ಸಂಬಂಧ ಇಂದು ಸಪ್ನಾ ನಾವಿ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಆರೋಪಿ ಮಹಿಳೆ ತನ್ನ 4 ವರ್ಷದ ಮಗಳು ಸಮೃದ್ಧಿಯನ್ನು ಕೊಲೆ ಮಾಡಿ, ಬಳಿಕ ತಾನೇನೂ ಮಾಡಿಲ್ಲ. ಮಗಳು ಪಿಟ್ಸ್ ನಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಳು. ಆದರೆ ಇದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಕ್ರೌರ್ಯ ಬೆಳಕಿಗೆ ಬಂದಿದ್ದು, ಮಲತಾಯಿಯ ಅಸಲಿ ಬಣ್ಣ ಬಯಲಾಗಿದೆ.
“ಪ್ರಾಥಮಿಕ ತನಿಖೆಯಲ್ಲಿ, ಮಗುವನ್ನು ಕೊಲ್ಲುವ ಉದ್ದೇಶದಿಂದ ಸಪ್ನಾ ನಿಯಮಿತವಾಗಿ ಕಿರುಕುಳ ನೀಡುತ್ತಿದ್ದಳು ಮತ್ತು ಹೊಡೆಯುತ್ತಿದ್ದಳು ಎಂದು ಬೆಳಕಿಗೆ ಬಂದಿದೆ.”ಮಗುವಿನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಗುವು ಆಕೆಯ ಮೇಲೆ ನಡೆದ ಹಲ್ಲೆಯ ಗಾಯಗಳಿಂದ ಸಾವನ್ನಪ್ಪಿದೆ ಎಂದು ತಿಳಿದ ತಕ್ಷಣ, ನಾವು ಸಪ್ನಾಳನ್ನು ಬಂಧಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಮೃತ ಬಾಲಕಿಯ ತಂದೆ ರಾಯಣ್ಣ ನವಿ ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳ ಹಿಂದೆ ತನ್ನ ಮೊದಲ ಹೆಂಡತಿಯ ಸಾವಿನ ನಂತರ ಸಪ್ನಾಳನ್ನು ಮದುವೆಯಾಗಿದ್ದರು.
ಮೃತ ಬಾಲಕಿ ಎರಡು ವರ್ಷದವಳಿದ್ದಾಗ ಆಕೆಯ ತಾಯಿಯನ್ನು ಅತ್ತೆ-ಮಾವಂದಿರು ಕೊಂದಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.ನಂತರ, ರಾಯಣ್ಣ ಸಪ್ನಾಳನ್ನು ವಿವಾಹವಾದರು ಮತ್ತು ಅವರು ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ಹೆಣ್ಣು ಮಗುವಿನೊಂದಿಗೆ ವಾಸಿಸುತ್ತಿದ್ದರು.