ಚನ್ನಮ್ಮನ ಕಿತ್ತೂರು, ಫೆಬ್ರುವರಿ 26 : ಉಗರಖೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚನ್ನಮ್ಮನ ಕಿತ್ತೂರು ಪಟ್ಟಣದ ಬೀಡಿ ರೋಡಿಗೆ ಹೊಂದಿಕೊಂಡಿರುವ ಬಸವ ನಗರದಲ್ಲಿ ಶ್ರೀ ಗುರು ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ, ರಾಷ್ಟ್ರೀಯ ಬಸವ ದಳ, ರಾಷ್ಟ್ರೀಯ ಬಸವ ಸೇನೆ ಹಾಗೂ ನಾಡಿನ ಶರಣರ ಉದಾರ ಸಹಕಾರದಿಂದ ನೂತನವಾಗಿ ನಿರ್ಮಿಸಲಾಗುತ್ತಿರುವ ಬಸವ ಮಂಟಪದ ಮೊದಲ ಮಹಡಿಯ ಸ್ಲ್ಯಾಬ್ ಅಳವಡಿಕೆ ಕಾರ್ಯ ಯಶಸ್ವಿಯಾಗಿ ನಡೆಸಲಾಯಿತು.
ಈ ಮಹತ್ವದ ಕಾರ್ಯಕ್ಕೆ ಶರಣರು ಮತ್ತು ಸ್ಥಳೀಯ ನಾಗರಿಕರು ಸಾಕಷ್ಟು ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಅಶೋಕ ಅಳ್ನಾವರ, ಮಲ್ಲಿಕಾರ್ಜುನ ಸಾಣಿಕೊಪ್ಪ, ಮಡಿವಾಳಪ್ಪ ಕೋರಿಶೆಟ್ಟಿ, ಮಡಿವಾಳಪ್ಪ ಕೋಟಿ, ಶಂಕರ ಕೊಳ್ಳಿ, ನೇತ್ರಾವತಿ ಬೆಣಚಮರಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.