
ಬೆಳಗಾವಿ, ನವೆಂಬರ್ 28: ಜಿಲ್ಲೆಯ ಖಾಸಗಿ ಆಸ್ಪತ್ರೆಯ ನರ್ಸ್ ಒಬ್ಬಳು ತನ್ನ ಪ್ರೀತಿಯನ್ನು ನಿರಾಕರಿಸಿದಳು ಅನ್ನುವ ಕಾರಣಕ್ಕಾಗಿ ಪಾಗಲ್ ಪ್ರೇಮಿವೊಬ್ಬ ಕುಪಿತಗೊಂಡು ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ!
ಮಗಳ ಮೇಲಿನ ಹಲ್ಲೆಯಿಂದ ನೊಂದುಕೊಂಡ ನರ್ಸ್ ತಂದೆ ಮೃತಪಟ್ಟಿದ್ದಾರೆ. ಹಲ್ಲೆಮಾಡಿದ ಆರೋಪಿ ಪ್ರಕಾಶ್ ಜಾಧವ್ ನನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್ ಗೆ ತನ್ನನ್ನು ಪ್ರೀತಿಸುವಂತೆ ಮತ್ತೆ ಮತ್ತೇ ಪೀಡಿಸುತ್ತಿದ್ದ ಪ್ರಕಾಶ್ ಅಕ್ಟೋಬರ್ 30ರಂದು ಕೈ ಚೀಲದಲ್ಲಿ ಮಚ್ಚು ಇಟ್ಟುಕೊಂಡು ಬಂದು ಅಸ್ಪತ್ರೆಯ ಕೌಂಟರ್ ಗೆ ನುಗ್ಗಿ, ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಈ ಭೀಭತ್ಸ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೃತ್ಯದ ಸಿಸಿಟಿವಿ ವಿಡಿಯೋ ಪೊಲೀಸರಿಗೆ ಲಭ್ಯವಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.