ಬೆಂಗಳೂರು, ನವೆಂಬರ್ 11:ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ವಾರ 402 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ 10ಕ್ಕೂ ಹೆಚ್ಚು ತಪ್ಪಾದ ಪ್ರಶ್ನೆಗಳನ್ನು ಕೇಳಿದೆ. ಈ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಆಕ್ಷೆಪಣೆಗಳಿದ್ದರೆ ಸಲ್ಲಿಸುವಂತೆ ಕೋರಿದೆ. ಆದರೆ, ಆಕ್ಷೆಪಣೆ ಸಲ್ಲಿಸುವ ಪ್ರತಿ ಒಂದು ಪ್ರಶ್ನೆಗೂ ನೂರು ರೂಪಾಯಿ ಶುಲ್ಕ ವಿಧಿಸಿದೆ.
ಪ್ರತಿ ತಪ್ಪಾದ ಪ್ರಶ್ನೆಗೆ ಆಕ್ಷೇಪಣೆ ಸಲ್ಲಿಸಲು 100 ರೂಪಾಯಿ ಹಣ ಕಟ್ಟಬೇಕು.10 ತಪ್ಪಾದ ಪ್ರಶ್ನೆಗಳಿಗೆ, ಪರೀಕ್ಷೆ ಬರೆದ ಲಕ್ಷಂತಾರ ಅಭ್ಯರ್ಥಿಗಳು 1,000 ರೂ.ನಷ್ಟು ಹೆಚ್ಚು ಹಣ ಪಾವತಿಸಿ ಆಕ್ಷೇಪಣೆ ಸಲ್ಲಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಪ್ರಾಧಿಕಾರಗಳು ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡುತ್ತಲೇ ಇವೆ. ಹೀಗಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು KEA ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.