spot_img
Monday, February 24, 2025
spot_imgspot_imgspot_imgspot_img
spot_img

Top 5 This Week

spot_img

Related Posts

ನಾಳೆ ಯುವ ಸಾಹಿತಿ ಸಿದ್ಧರಾಮ ತಳವಾರ ಅವರ ‘ಕೇರಿ ಹುಡುಗನ ಕಥೆಗಳು’ ಕಥಾ ಸಂಕಲನ ಬಿಡುಗಡೆ


ಚನ್ನಮ್ಮನ ಕಿತ್ತೂರು, ಫೆ 20: ಬಂಡಾಯ ಸಾಹಿತ್ಯ ಸಂಘಟನೆಯ ವತಿಯಿಂದ ದಾಸ್ತಿಕೊಪ್ಪ ಗ್ರಾಮದ ಯುವ ಸಾಹಿತಿ ಸಿದ್ದರಾಮ ತಳವಾರ ಅವರ ‘ಕೇರಿ ಹುಡುಗನ ಕಥೆಗಳು’ ಕಥಾ ಸಂಕಲನದ ಬಿಡುಗಡೆ ಸಮಾರಂಭ ನಾಳೆ (ಫೆಬ್ರವರಿ 21) ಸಂಜೆ 4:30 ಕ್ಕೆ ಬೆಳಗಾವಿ ನಗರದ ಕೊಲ್ಲಾಪೂರ ಸರ್ಕಲ್ ಹತ್ತಿರ ಇರುವ ಮಾನವ ಬಂಧುತ್ವ ವೇದಿಕೆಯ ಸಭಾ ಭವನದಲ್ಲಿ ನಡೆಯಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಬೆಳಗಾವಿಯ ಬಂಡಾಯ ಸಾಹಿತಿ ಡಾ ವೈ. ಬಿ. ಹಿಮ್ಮಡಿ
ಅವರು ವಹಿಸಲಿದ್ದಾರೆ. ಕಥಾ ಸಂಕಲನವನ್ನು ರಾಜಧಾನಿ ಬೆಂಗಳೂರಿನ ಬಂಡಾಯ ಸಾಹಿತಿ ಡಾ. ಸಿದ್ದನಗೌಡ ಪಾಟೀಲ ಅವರು ಬಿಡುಗಡೆ ಮಾಡಲಿದ್ದಾರೆ.

ಪುಸ್ತಕದ ಕುರಿತು ಗೋಕಾಕ ಪಟ್ಟಣದ ಯುವ ಕಥೆಗಾರ ಇಸ್ಮಾಯಿಲ್ತಳಕಲ್ಲ ಅವರು ಮಾತನಾಡಲಿದ್ದಾರೆ. ಲೇಖಕರುಯುವ ಸಾಹಿತಿಗಳಾದ ಸಿದ್ಧರಾಮ ತಳವಾರ ಅವರು ಉಪಸ್ಥಿತ ಇರಲಿದ್ದಾರೆ. ಸಾಹಿತಿಗಳು, ಸಾಹಿತ್ಯ ಪ್ರೇಮಿಗಳು, ಬಂಡಾಯ ಸಾಹಿತಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೆಳಗಾವಿ ಬಂಡಾಯ ಸಾಹಿತಿಗಳಾದ ನದೀಮ ಸನದಿ ಮತ್ತು ದೇಮಣ್ಣ ಸೊಗಲದ ಅವರು ಮನವಿ ಮಾಡಿದ್ದಾರೆ.


कोई जवाब दें

कृपया अपनी टिप्पणी दर्ज करें!
कृपया अपना नाम यहाँ दर्ज करें

Popular Articles