
ಚನ್ನಮ್ಮನ ಕಿತ್ತೂರು, ಅಕ್ಟೋಬರ್ 07: ಕಿತ್ತೂರು ವಿಜಯೋತ್ಸವದ 200ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕಿತ್ತೂರು ಉತ್ಸವ-2024 ರಿ ಪೂರ್ವಸಿದ್ಧತೆ ಭರದಿಂದ ನಡೆದಿದೆ.
ನೆನ್ನೆಯಷ್ಟೇ ಶಾಸಕ ಬಾಬಾಸಾಹೇಬ ಪಾಟೀಲ ಅವರು ಕೋಟೆ ಆವರಣದ ಸ್ವಚ್ಛತಾ ಕಾರ್ಯ ಹಾಗೂ ಇತರೆ ಕೆಲಸಗಳ ಪ್ರಗತಿ ಪರಿಶೀಲನೆ ಮಾಡಿದ್ದಾರೆ.
ನಾಳೆ ಮಂಗಳವಾರ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಕಿತ್ತೂರಿಗೆ ಆಗಮಿಸುತ್ತಿದ್ದು, ರೂಂ.12.11 ಕೋಟಿ ಮೊತ್ತದ ಕೋಟೆ ಸಂರಕ್ಷಣೆ, ರೂಂ.2.40 ಕೋಟಿ ಮೊತ್ತದ ಅರಮನೆ ಸಂರಕ್ಷಣೆ, 3.17 ಕೋಟಿ ಮೊತ್ತದ ಲ್ಯಾಂಡ್ ಸ್ಕೇಪಿಂಗ್, 30.50 ಕೋಟಿ ಮೊತ್ತದ ಥೀಮ್ ಪಾರ್ಕ್ ಹಾಗೂ ರೂಂ.3.00 ಕೋಟಿ ಮೊತ್ತದಲ್ಲಿ ಚನ್ನಮ್ಮ ಸ್ಮಾರಕ ಭವನದ ಮುಂದುವರೆದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕಿತ್ತೂರು ಕಲ್ಮಠದ ಶ್ರೀಗಳು, ನಿಚ್ಚಣಕಿಯ ಮಡಿವಾಳೇಶ್ವರ ಮಠದ ಶ್ರೀಗಳು ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ವೇಳೆ ಉಪಸ್ಥಿತರಿರಲಿದ್ದಾರೆ.
200 ನೇರ ವರ್ಷದ ಹರ್ಷದಲ್ಲಿರುವ ಕಿತ್ತೂರು ನಾಡಿನ ಜನತೆಗೆ ಸುಮಾರು 50.00 ಕೋಟಿ ವೆಚ್ಚದ ಈ ಕಾಮಗಾರಿಗಳಿಗೆ ಚಾಲನೆ ದೊರೆಯುತ್ತಿರುವುದು ಸಂಭ್ರಮ ಮೂಡಿಸಿದೆ. ಶಾಸಕ ಬಾಬಾಸಾಹೇಬ ಪಾಟೀಲ ಅವರ ಈ ಕಾರ್ಯ ಶ್ಲಾಘನೀಯ ಎಂದು ಜನ ಅಭಿಪ್ರಾಯ ಪಟ್ಟಿದ್ದಾರೆ.