
ತೆಲಂಗಾಣ, ನವೆಂಬರ್ 27: ಫೆಂಗಲ್ ಚಂಡಮಾರುತದ ಪರಿಣಾಮ ಬಂಗಾಳಕೊಲ್ಲಿಯಲ್ಲಿ ಈಗಾಗಲೇ ಬಲವಾದ ಗಾಳಿ ಬೀಸುತ್ತಿದೆ. ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಗುರುವಾರ ಇದರ ವೇಗ ಮತ್ತಷ್ಟು ಹೆಚ್ಚಾಗಲಿದೆ.
ಈ ಗಾಳಿ, ಮಳೆ ಅನಾಹುತದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ರಿಸ್ಕ್ ಆಗಬಹುದು ಅನ್ನುವ ಕಾರಣಕ್ಕಾಗಿ ಶಾಲೆ, ಕಾಲೇಜುಗಳಿಗೆ 3 ದಿನಗಳು ರಜೆ ಘೋಷಿಸಲಾಗಿದೆ.
ರವಿವಾರ ಸಾಮಾನ್ಯ ರಜೆ ಇದೆ.ರಾಯಲಸೀಮಾ ಮತ್ತು ಆಂಧ್ರಪ್ರದೇಶದ ಕರಾವಳಿ ಮೇಲೆಯೂ ಇದರ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆದ್ದರಿಂದ ಆಂಧ್ರ ಪ್ರದೇಶದಲ್ಲಿ ನವೆಂಬರ್ 28, 29 ಮತ್ತು 30 ರಂದು ಆಂಧ್ರ ಪ್ರದೇಶದ ಮೇಲೆ ಇರುತ್ತದೆ. ಹೀಗಾಗಿ ಆ 3 ದಿನ ಕೆಲ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಮೀನುಗಾರಿಕಾ ದೋಣಿಗಳಿಗೂ ಬೇಟೆಗೆ ತೆರಳದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಭತ್ತದ ಕಟಾವಿಗೆ ಹೋಗುವ ರೈತರೂ ಮುಂಜಾಗ್ರತೆ ವಹಿಸಬೇಕು ಎಂದು ಹವಾಮಾನ ಇಲಾಖೆ (IMD) ಸಲಹೆ ನೀಡಿದೆ.