spot_img
Monday, January 13, 2025
spot_imgspot_imgspot_imgspot_img
spot_img

Top 5 This Week

spot_img

Related Posts

ನವಿಲು ತೀರ್ಥ ಡ್ಯಾಂ ಗೆ ಬಾಗಿನ ಅರ್ಪಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಸವದತ್ತಿ, ಅಕ್ಟೋಬರ್ 15: ಉತ್ತರ ಕರ್ನಾಟಕ ಭಾಗದ ಜೀವನಾಡಿ ಮಲಪ್ರಭಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಇಂದು ಮುನವಳ್ಳಿಯ ನವೀಲುತೀರ್ಥ ಡ್ಯಾಂ ಸೈಟ್ ಗೆ ತೆರಳಿ ಅತ್ಯಂತ ಸಂತೋಷದಿಂದ ಜಲಾಶಯಕ್ಕೆ ಗಂಗಾಪೂಜೆ ನೇರವೇರಿಸಿ, ಬಾಗಿನ ಅರ್ಪಿಸಿದರು.

ಈ ವರ್ಷ ವರುಣನ ಕೃಪೆಯಿಂದ ನದಿ ಮೈದುಂಬಿ ಹರಿಯುತ್ತಿದ್ದು, ರೈತರು ಖುಷಿಯಲ್ಲಿದ್ದಾರೆ. ಈ ಶುಭ ಸಂದರ್ಭದಲ್ಲಿ ತಾಯಿ ಮಲಪ್ರಭೆ ರೈತರ ಎಲ್ಲ ಕನಸುಗಳನ್ನು ನನಸಾಗಲೆಂದು ಪ್ರಾರ್ಥಿಸಿದರು.

ಈ ವೇಳೆ ಶಾಸಕರಾದ ಸವದತ್ತಿ ಶಾಸಕರಾದ ವಿಶ್ವಾಸ್ ವೈದ್ಯ, ನವಲಗುಂದ ಶಾಸಕರಾದ ಎನ್.ಎಚ್ ಕೋನರೆಡ್ಡಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಬದಾಮಿ ಶಾಸಕರಾದ ಬಿ.ಬಿ.ಚಿಮ್ಮನಕಟ್ಟಿ, ಮುಖ್ಯ ಇಂಜಿನಿಯರ್ ಎ.ಎಲ್ ವಾಸನದ, ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಸದಾಶಿವಗೌಡ ಪಾಟೀಲ, ನೀರಾವರಿ ನಿಗಮದ ಸೂಪರಿಂಟೆಂಡೆಂಟ್ ಇಂಜಿನಿಯರ್ ವಿ.ಎಸ್ ಮಧುಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

कोई जवाब दें

कृपया अपनी टिप्पणी दर्ज करें!
कृपया अपना नाम यहाँ दर्ज करें

Popular Articles