
ಚನ್ನಮ್ಮನ ಕಿತ್ತೂರು: ಕಿತ್ತೂರು ವಲಯದ ಡೊಂಬರಕೊಪ್ಪ ಗ್ರಾಮ ಕಾರ್ಯಕ್ಷೆತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಗಾವಿ ಮತ್ತು ಕಿತ್ತೂರು ತಾಲ್ಲೂಕು ಹಾಗೂ ಸಾಯಿ ದೀಪಾ ಕಣ್ಣಿನ ತಪಾಸಣೆ ಆಸ್ಪತ್ರೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಕಣ್ಣಿನ ತಪಾಸಣಾ ಶಿಬಿರ ಜರುಗಿತು ಗ್ರಾಮ ಪಂಚಾಯತ ಸದಸ್ಯೆ ಶೋಭಾ ಅಜ್ಜಪ್ಪ ಬ್ಯಾಳಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ ಬೆಡಸೂರ ಒಕ್ಕೂಟದ ಉಪಾಧ್ಯಕ್ಷೆ ಸುರೇಖಾ ಗುದಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಈ ವೇಳೆ ಸೇವಾ ಪ್ರತಿನಿಧಿ ಒಕ್ಕೂಟದ ಪದಾಧಿಕಾರಿಗಳು ಸರ್ವ ಸದಸ್ಯರು, ಸ್ವಸಹಾಯ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿದಂತೆ ಒಟ್ಟು 156 ಜನ ಶಿಬಿರದಲ್ಲಿ ಭಾಗಿಯಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು.ಈ ವೇಳೆ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಗಾವಿ ಮತ್ತು ಕಿತ್ತೂರು ತಾಲ್ಲೂಕು ಹಾಗೂ ಸಾಯಿ ದೀಪಾ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ, ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.