Home ಅಂತರರಾಷ್ಟ್ರೀಯ ಅಂತರಾಷ್ಟ್ರೀಯ ದೇವರಶೀಗಿಹಳ್ಳಿಯಲ್ಲಿ ನೇತಾಜಿ ಜಯಂತಿ ಕಾರ್ಯಕ್ರಮ

ದೇವರಶೀಗಿಹಳ್ಳಿಯಲ್ಲಿ ನೇತಾಜಿ ಜಯಂತಿ ಕಾರ್ಯಕ್ರಮ

0
ದೇವರಶೀಗಿಹಳ್ಳಿಯಲ್ಲಿ ನೇತಾಜಿ ಜಯಂತಿ ಕಾರ್ಯಕ್ರಮ

ಎಂ.ಕೆ. ಹುಬ್ಬಳ್ಳಿ: ಕೆ.ಎಚ್.ಪಿ.ಎಸ್ ದೇವರಶೀಗಿಹಳ್ಳಿ ಶಾಲೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಂ.ಕೆ. ಹುಬ್ಬಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಿನೋದ್ ಪಾಟೀಲ್ ಸರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅವರು ಮಕ್ಕಳಿಗೆ ನೇತಾಜಿಯವರ ಜೀವನ, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಮಹತ್ವದ ಪಾತ್ರ ಮತ್ತು ದೇಶಪ್ರೇಮವನ್ನು ಪ್ರೇರೇಪಿಸುವ ಅವರ ಕಠಿಣ ಪರಿಶ್ರಮದ ಬಗ್ಗೆ ವಿವರವಾಗಿ ತಿಳಿಸಿದರು.

ಶಾಲೆಯ ಪ್ರಧಾನ ಗುರುಗಳು ಮಾತನಾಡಿ, “ನೇತಾಜಿಯ ಆದರ್ಶಗಳು ನಮ್ಮ ಜೀವನದಲ್ಲಿ ಮೌಲ್ಯವಾದ ಪಾಠಗಳನ್ನು ನೀಡುತ್ತವೆ. ಮಕ್ಕಳಿಗೆ ದೇಶಪ್ರೇಮವನ್ನು ಬೆಳೆಸುವುದರ ಜೊತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಮಕ್ಕಳಿಗೆ ಪ್ರೇರಣೆ ನೀಡಿದರು.

ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ಎಂ.ಬಿ. ಶಟ್ಟೆನ್ನವರ್ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.

LEAVE A REPLY

Please enter your comment!
Please enter your name here