
ಬೆಂಗಳೂರು,ಅಕ್ಟೋಬರ್ 05: ಕೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿ ಕುರಿತು ಈವತ್ತು ವಿಚಾರಣೆ ಮುಂದುವರೆದಿದ್ದು ದರ್ಶನ್ ಪರ ವಕೀಲ ಸಿವಿ ನಾಗೇಶ್ ಈ ದಿನ 3 ಗಂಟೆಗೆ ಪುನಃ ವಾದ ಮಂಡಿಸಲಿದ್ದಾರೆ.
ನಿನ್ನೆಯಷ್ಟೇ ಚಾರ್ಜ್ ಶೀಟ್ ನಲ್ಲಿರುವ ಲೋಪದೋಷಗಳ ಬಗ್ಗೆ ವಾದ ಮಂಡಿಸಿದ ಅವರು ಇದೊಂದು ವರ್ಸ್ಟ್ ಚಾರ್ಜ್ ಶೀಟ್ ಅಂತ ವಾದಿಸಿದ್ದರು. ಇಂದು ಪುನಃ ವಾದ ಮಂಡಿಸುವುದಾಗಿ ಹೇಳಿದ್ದರು. ಹೀಗಾಗಿ ಇಂದು ಮದ್ಯಾಹ್ನ ತಮ್ಮ ವಾದ ಮುಂದುವರೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ ಜೈಲಲ್ಲಿ ನೂರು ದಿನಕ್ಕೂ ಹೆಚ್ಚು ಕಾಲ ಕಳೆದ ನಟ ದರ್ಶನ್ ಟೆನ್ಶನ್ ನಲ್ಲಿದ್ದು ಈವತ್ತಿನ ತೀರ್ಪಿನ ನಂತರ ಅವರು ಜಾಮೀನಿನ ಮೇಲೆ ಹೊರಗೆ ಬರ್ತಾರಾ ಅನ್ನೋದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.