
ಎಮ್.ಕೆ. ಹುಬ್ಬಳ್ಳಿ: ತುರಮರಿ ಹಾಗೂ ತಿಗಡೊಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಆಯ್ಕೆಯಾದ ನೂತನ ನಿರ್ದೇಶಕರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ಅಭಿನಂದಿಸಿದ್ದಾರೆ.

ನೇಗಿನಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಮುಖಂಡರಾದ ನಾನಾಸಾಹೇಬ ಪಾಟೀಲ ಅವರು ನೂತನ ನಿರ್ದೇಶಕರಿಗೆ ಸತ್ಕರಿಸಿದರು.