ಚನ್ನಮ್ಮನ ಕಿತ್ತೂರು: ಸಮೀಪದ ಡೋರಿ ಗ್ರಾಮದಲ್ಲಿ ಸಾವಯವ ಕೃಷಿ ಮತ್ತು ಕಬ್ಬಿನ ಇಳುವರಿ ಹೆಚ್ಚಿಸುವ ಕುರಿತು ವಿಶೇಷ ತರಬೇತಿ ಡೋರಿ ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಮೃತ ಮಹೋತ್ಸವದ ಅಂಗವಾಗಿ, ಕಬ್ಬಿನ ಬೆಳೆಯ ಇಳುವರಿಯನ್ನು ಹೆಚ್ಚಿಸುವ ಕುರಿತು ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗಿನ್ನಿಸ್ ದಾಖಲೆಯ ಸಾಧನೆ ಮಾಡಿದ, ವಿಶ್ವಪ್ರಸಿದ್ಧ ಕೃಷಿ ರತ್ನ ಡಾ. ಸಂಜಯ್ ಮಾನೆ (ಆಸ್ಟಾ ಗ್ರಾಮ, ಸಾಂಗ್ಲಿ, ಮಹಾರಾಷ್ಟ್ರ) ಅವರು ರೈತರಿಗೆ ಮಾರ್ಗದರ್ಶನ ನೀಡಲಿದ್ದಾರೆ.158 ಟನ್ ಕಬ್ಬಿನ ಇಳುವರಿ ಪಡೆದ ಡಾ. ಮಾನೆ ಅವರ ಜೊತೆಗೆ ಪ್ರಗತಿಪರ ರೈತರಾದ ಬೆಲ್ಲದ ಬಾಗೇವಾಡಿ ಸುಧೀರ್ ಕತ್ತಿ ಕಲ್ಲಳ್ಳಿ ಬಾಳಪ್ಪ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.ಕಾರ್ಯಕ್ರಮದ ದಿನಾಂಕ: 17-03-2025 ರಂದುಸಮಯ: ಬೆಳಿಗ್ಗೆ 11:00ಸ್ಥಳ: ಡೋರಿ ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಸಭಾಂಗಣಮೂಲಸೌಕರ್ಯಗಳನ್ನು ಸುಧಾರಿಸುವುದು, ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಸಾವಯವ ಕೃಷಿಯ ಮೂಲಕ ಇಳುವರಿ ಹೆಚ್ಚಿಸುವ ಕುರಿತು ತಿಳಿಯಲು ಇದು ರೈತಬಾಂಧವರಿಗೆ ಅಪೂರ್ವ ಅವಕಾಶ. ಆದ್ದರಿಂದ, ಎಲ್ಲಾ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನುಭವವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಲಾಗುತ್ತದೆ.