Home ರಾಜಕೀಯ ಡಿಸೆಂಬರ್ 5 ರಂದು ಮಹಾ ಸರ್ಕಾರ ರಚನೆ: ಬಿಜೆಪಿ ಪ್ರಕಟಣೆ

ಡಿಸೆಂಬರ್ 5 ರಂದು ಮಹಾ ಸರ್ಕಾರ ರಚನೆ: ಬಿಜೆಪಿ ಪ್ರಕಟಣೆ

0
ಡಿಸೆಂಬರ್ 5 ರಂದು ಮಹಾ ಸರ್ಕಾರ ರಚನೆ: ಬಿಜೆಪಿ ಪ್ರಕಟಣೆ

ಮುಂಬೈ, ನವೆಂಬರ್ 30: ಮಹಾರಾಷ್ಟ್ರದ ನೂತನ ಮಹಾಯುತಿ ಸರಕಾರ ಡಿಸೆಂಬರ್ 5 ರಂದು ಸಂಜೆ ಆಜಾದ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ರಾಜ್ಯ ಬಿಜೆಪಿ ಶನಿವಾರ ಪ್ರಕಟಿಸಿದೆ.

ಮುಖ್ಯಮಂತ್ರಿ ಯಾರೆಂಬುದರ ಕುರಿತು ಇನ್ನೂ ಯಾವುದೇ ಘೋಷಣೆಯಾಗದಿದ್ದರೂ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಮತ್ತು ಕಳೆದ ಏಕನಾಥ್ ಶಿಂಧೆ ನೇತೃತ್ವದ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ಅವರು ಉನ್ನತ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here