
ನವದೆಹಲಿ, ನವೆಂಬರ್ 13: ಉಪಚುನಾವಣೆಗಳ ಜೊತೆಯಲ್ಲಿಯೇ ಜಾರ್ಖಂಡ್ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಗೆ ಮೊದಲ ಹಂತದ ಮತದಾನವೂ ಇಂದು (ಬುಧವಾರ) ನಡೆಯಲಿದೆ.
ಒಟ್ಟು 81 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನನಡೆಯಲಿದೆ. ಮಹಾರಾಷ್ಟ್ರದ ಎಲ್ಲ 288 ಕ್ಷೇತ್ರಗಳೊಂದಿಗೆ ಜಾರ್ಖಂಡ್‌ನ ಉಳಿದ 38 ಕ್ಷೇತ್ರಗಳಿಗೂ ನ.20ರಂದು ಮತದಾನನಡೆಯಲಿದೆ.
ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ‘ಇಂಡಿಯಾಮೈತ್ರಿಕೂಟವು ಮರಳಿ ಅಧಿಕಾರಕ್ಕೆ ಬರುವ ಯತ್ನದಲ್ಲಿದೆ. ಆದರೆ ಬಿಜೆಪಿಯು ‘ಇಂಡಿಯಾ’ಕ್ಕೆ ತೀವ್ರ ಸ್ಪರ್ಧೆ ಒಡ್ಡುತ್ತಿದೆ.

ತನ್ನ ಉಗ್ರಹಿಂದುತ್ವ’ ಕಾರ್ಯಸೂಚಿಯನ್ನು ಬಿಜೆಪಿ ಜನರ ಮುಂದಿರಿಸಿದೆ.ಜೊತೆಗೆ, ‘ಬಾಂಗ್ಲಾದೇಶದ ನುಸುಳುಕೋರರನ್ನು ಇಲ್ಲಿನಸರ್ಕಾರವು ಜಾರ್ಖಂಡ್ ಒಳಗೆ ಬಿಟ್ಟುಕೊಳ್ಳುತ್ತಿದೆ’ ಎಂಬಆರೋಪವನ್ನು ಬಿಜೆಪಿ ಮಾಡಿದೆ.
ಇದಕ್ಕೆ ಪ್ರತಿಯಾಗಿ ‘ಇಂಡಿಯಾ’ವು ಉದ್ಯೋಗ, ಜಾತಿ ಜನಗಣತಿ, ಸಂವಿಧಾನ ರಕ್ಷಣೆ, ಮಹಿಳೆಯರಿಗೆ ಧನಸಹಾಯ ಮುಂತಾದ ಅಭಿವೃದ್ಧಿ ಕೇಂದ್ರಿತ ವಿಚಾರಗಳನ್ನು ಜನರ ಮುಂದಿಟ್ಟಿದೆ.