Home ವಿಶೇಷ ಚಲನಚಿತ್ರ ನಟಿ ಪೂಜಾಗಾಂಧಿಗೆ “ಶರಣೆ ಬೊಂತಾದೇವಿ” ಪ್ರಶಸ್ತಿ

ಚಲನಚಿತ್ರ ನಟಿ ಪೂಜಾಗಾಂಧಿಗೆ “ಶರಣೆ ಬೊಂತಾದೇವಿ” ಪ್ರಶಸ್ತಿ

0

ಬೆಂಗಳೂರು: ಪ್ರಖ್ಯಾತ ನಟಿ ಪೂಜಾಗಾಂಧಿ ಅವರಿಗೆ ಪ್ರತಿಷ್ಠಿತ “ಶರಣೆ ಬೊಂತಾದೇವಿ” ಪ್ರಶಸ್ತಿ ನೀಡಲಾಗಿದೆ. ಅಕ್ಕನಮನೆ ಪ್ರತಿಷ್ಠಾನ, ಬೆಂಗಳೂರು ಆಯೋಜಿಸಿದ “ಸಂಸ್ಕೃತಿ ಸಂಭ್ರಮ 2025” ಕಾರ್ಯಕ್ರಮದಲ್ಲಿ ಈ ಗೌರವವನ್ನು ಪ್ರಧಾನ ಮಾಡಲಾಯಿತು

ಪೂಜಾ ಗಾಂಧಿಯವರು ಉತ್ತರಪ್ರದೇಶದಲ್ಲಿ ಜನ್ಮ ಪಡೆದರೂ ಕನ್ನಡ ಭಾಷೆಯನ್ನು ಪ್ರೀತಿಯಿಂದ ಅಳವಡಿಸಿಕೊಂಡು, ಸುಮಾರು 50ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಸವ ತತ್ವವನ್ನು ಮೆಚ್ಚಿಕೊಂಡು ವಚನ ಸಾಹಿತ್ಯವನ್ನು ಪ್ರಚಾರಗೊಳಿಸುವ ಕೆಲಸದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ವಚನಗಳನ್ನು ಅಸ್ಖಲಿತವಾಗಿ ಹೇಳಿ ಅದರ ವಿವರಣೆ ನೀಡುವ ಅವರ ಪ್ರಭಾವಿ ಶೈಲಿ ಜನಮನ ಸೆಳೆದಿದೆ.ಈ ಪ್ರಶಸ್ತಿಯನ್ನು ಕಾಶ್ಮೀರ ಮೂಲದ ಶರಣೆ ಬೊಂತಾದೇವಿಯ ಹೆಸರಿನಲ್ಲಿ ನೀಡಲಾಗಿದೆ. ಕಲ್ಯಾಣದ ಶರಣ ಸಂಪ್ರದಾಯದಲ್ಲಿ ನಿರತಳಾಗಿ, “ಬಿಡಾಡಿ” ಅಂಕಿತದೊಂದಿಗೆ ವಚನ ರಚಿಸಿದ ಬೊಂತಾದೇವಿ, ಬಸವ ತತ್ವದ ಪ್ರಮುಖ ಶರಣಿಯರಲ್ಲಿ ಒಬ್ಬರು.ಅವರ ತತ್ವಗಳಿಗೆ ಪೂಜಾಗಾಂಧಿಯವರು ಅನ್ವಯಿಸುವ ರೀತಿಯು ಗಮನಾರ್ಹವಾಗಿದ್ದು, ಕನ್ನಡಪರ ಸೇವೆ, ವಚನ ಪ್ರಚಾರ, ಬೇರುಮಟ್ಟದ ಕಾರ್ಯಗಳಲ್ಲಿ ಅವರ ಕೊಡುಗೆಗಳನ್ನು ಮಾನ್ಯತೆ ನೀಡಿ ಈ ಪ್ರಶಸ್ತಿ ನೀಡಲಾಗಿದೆ.ಸಂಸ್ಕೃತಿ ಸಂಭ್ರಮ 2025 ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದು, ಪೂಜಾಗಾಂಧಿಯವರ ಕನ್ನಡ ಮತ್ತು ಬಸವ ತತ್ವದ ಸೇವೆಯನ್ನು ಪ್ರಶಂಸಿಸಿದರು.

LEAVE A REPLY

Please enter your comment!
Please enter your name here