
ತಮಿಳುನಾಡು: ತಿರುವಲ್ಲುವರನ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲೊಂದಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ತಕ್ಷಣಕ್ಕೆ ಹೊತ್ತಿಕೊಂಡ ಬೆಂಕಿಗೆ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಸುಟ್ಟು ಹೋಗಿವೆ. ಎಕ್ಸ್‌ಪ್ರೆಸ್ ರೈಲಿನ ಸುಮಾರು 6 ಬೋಗಿಗಳು ಹಳಿ ತಪ್ಪಿ ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ಬಗ್ಗೆ ವರದಿಯಾಗಿದೆ.
‘ ಮೈಸೂರು-ದರ್ಬಂಗಾ ಎಕ್ಸ್‌ಪ್ರೆಸ್ 12578’ ರೈಲು ಚೆನ್ನೈ ಹೊರವಲಯದ ಕವರೈಪೆಟ್ಟೈನಲ್ಲಿ ರಾತ್ರಿ 8:50 ಕ್ಕೆ ನಿಂತಿದ್ದ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಮತ್ತು ಆಂಬ್ಯುಲೆನ್ಸ್ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಉಂಟಾದ ಹಾನಿ ಮತ್ತು ಸಾವು ನೋವುಗಳ ಬಗ್ಗೆ ಪ್ರಾಥಮಿಕ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ತಿರುವಲ್ಲೂರು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.