
ಮುಂಬೈ: ಅನಾರೋಗ್ಯ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಉದ್ಯಮಿ Ratan Tata (86)ಬುಧವಾರ ತಡರಾತ್ರಿ ವಿಧಿವಶರಾಗಿದ್ದಾರೆ.
ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹ ಟಾಟಾ ಸನ್ಸ್‌ನ ಚೇರ್ಮನ್ ರತನ್ ಟಾಟಾ ವಿಧಿವಶರಾಗಿದ್ದು, ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಎರಡು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ರತನ್ ಟಾಟಾ ಸಮಾಜದ ಒಳಿತಿಗಾಗಿ ಮಾಡದೇ ಇರುವ ಕೆಲಸಗಳೇ ಇಲ್ಲ, ಯಾಕೆ ಅಂದರೆ ರತನ್ ಟಾಟಾ ಅವರು ಕಟ್ಟುತ್ತಿದ್ದ ಪ್ರತಿಯೊಂದು ಉದ್ಯಮದಲ್ಲೂ ಸಮಾಜ ಸೇವೆಗೆ ಬೇಕಾಗಿದ್ದ ವಿಚಾರಗಳು ಇರುತ್ತಿದ್ದವು. ಹೀಗಿದ್ದರೂ ರತನ್ ಟಾಟಾ ಅವರು ಕೋಟಿ ಕೋಟಿ ರೂಪಾಯಿ ದಾನ ಮಾಡಿ ಮಾದರಿ ಆಗಿದ್ದರು..
ಖ್ಯಾತ ಉದ್ಯಮಿ ರತನ್ ಟಾಟಾ ನಿಧನಕ್ಕೆ ದೇಶದ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದು, ‘ದೂರದೃಷ್ಟಿಯ ವ್ಯಕ್ತಿ’ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.