Home ಅಂತರರಾಷ್ಟ್ರೀಯ ಅಂತರಾಷ್ಟ್ರೀಯ ಕ್ರಾಂತಿ ನೆಲ ಕಿತ್ತೂರು ಹಿರಿಮೆಗೆ ಮತ್ತೊಂದು ಗರಿ ತಂದ ಪೈಲ್ವಾನ್ ಕೆಂಪಣ್ಣ

ಕ್ರಾಂತಿ ನೆಲ ಕಿತ್ತೂರು ಹಿರಿಮೆಗೆ ಮತ್ತೊಂದು ಗರಿ ತಂದ ಪೈಲ್ವಾನ್ ಕೆಂಪಣ್ಣ

0
ಕ್ರಾಂತಿ ನೆಲ ಕಿತ್ತೂರು ಹಿರಿಮೆಗೆ ಮತ್ತೊಂದು ಗರಿ ತಂದ ಪೈಲ್ವಾನ್ ಕೆಂಪಣ್ಣ
ಪೈಲ್ವಾನ ಕೆಂಪಣ್ಣ ಅವರನ್ನು ನಿಜಗುಣಾನಂದ ಶ್ರೀಗಳು ಸನ್ಮಾನಿಸಿ ಗೌರವಿಸಿದರು

ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪೈಲ್ವಾನ್ ಕೆಂಪಣ್ಣ

ಸುವರ್ಣ ಸಮಾಚಾರ ನ್ಯೂಸ್

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಭಾರತದ ಸ್ವಾತಂತ್ರ‍್ಯದ ಚರಿತ್ರೆಯ ಪುಟಗಳನ್ನೊಮ್ಮೆ ತೆರೆದು ನೋಡಿದರೆ ಸಾಕು ದೇಶಾಭಿಮಾನ ಮೈವೆತ್ತು ಮೈ ಜುಮ್ಮೆನ್ನಿಸುವಂತ ಅನುಭವ ತರುತ್ತದೆ. ಕಿತ್ತೂರು ಸಾಮಾನ್ಯ ಸಂಸ್ಥಾನದ ಮಹಿಳೆ ಬ್ರಿಟಿಷ ಸಾಮ್ರಾಜ್ಯದ ವಿರುದ್ದವೇ ಸೆಟೆದು ನಿಂತು ತೊಡೆ ತಟ್ಟಿ ದಿಟ್ಟತನದಿಂದ ಕೆಂಪು ಕೋತಿಗಳ ಅಟ್ಟಹಾಸ ಮೆಟ್ಟಿ ನಿಂತ ವೀರ ಪರಾಕ್ರಮದ ಇತಿಹಾಸ ಹೊಂದಿದ ಐತಿಹಾಸಿಕ ಕ್ರಾಂತಿ ನೆಲ ಚನ್ನಮ್ಮನ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದ ಯುವಕ ಪೈಲ್ವಾನ್ ಕೆಂಪಣ್ಣ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ಕ್ರಾಂತಿಕಾರಿಗಳ ಹೋರಾಟ ನೆಲದ ವೀರ ಪರಂಪರೆಯನ್ನು ಮುಂದುವರೆಸುವ  ಮೂಲಕ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯುವಂತೆ ಮಾಡಿದ್ದಾನೆ.

ಆಗಸ್ಟ್ 28 ರಿಂದ 31 ರ ವರೆಗೆ ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪೈಲ್ವಾನ್ ಕೆಂಪಣ್ಣ ಅವರು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಸೆಪ್ಟೆಂಬರ್ 02 ರಂದು ಅಂತಿಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಇವರನ್ನು ಬೈಲೂರಿನ ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ಸತ್ಕರಿಸಿ ಶುಭ ಹಾರೈಸಿದರು.

ಸ್ಥಳೀಯ ಚರ್ಚವೊಂದರಲ್ಲಿ ಇವರನ್ನು ಅಭಿನಂದಿಸಿ ಶುಭ ಕೋರಿದ ನಂತರ ಶ್ರೀಮಠದಲ್ಲಿ ಆಹ್ವಾನಿಸಿದ ಶ್ರೀಗಳು ಗೌರವ ಸಮರ್ಪಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here