
ಚನ್ನಮ್ಮನ ಕಿತ್ತೂರು: ಕುಲವಳ್ಳಿ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್ (Foundational Literacy and Numeracy) ಆಧಾರಿತ ಮಕ್ಕಳ ಕಲಿಕಾ ಹಬ್ಬ ಕತ್ರಿದಡ್ಡಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಶಾಲೆಯ ಮುಖ್ಯ ದ್ವಾರದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಅತಿಥಿಗಳನ್ನು ಡೊಳು ಬಾರಿಸುತ್ತಾ ಸ್ವಾಗತಿಸಿ ಕಾರ್ಯಕ್ರಮ ಸ್ಥಳಕ್ಕೆ ಕರೆತರಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಿತ್ತೂರು ಕ್ಷೇತ್ರ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನವರ ಕಲಿಕಾ ಹಬ್ಬದ ಮಹತ್ವದ ಕುರಿತು ಮಾತನಾಡಿ, ವಿದ್ಯಾರ್ಥಿಗಳ ಸೃಜನಾತ್ಮಕತೆಯನ್ನು ಉತ್ತೇಜಿಸುವುದರ ಅವಶ್ಯಕತೆಯನ್ನು ವಿವರಿಸಿದರು.
ಕುಲವಳ್ಳಿ ಕ್ಲಸ್ಟರ್ ಸಿ.ಆರ್.ಪಿ ಸಂಜು ಹುಬ್ಬಳ್ಳಿ ಅವರು ಮಕ್ಕಳ ಕಲಿಕಾ ಹಬ್ಬದ ಉದ್ದೇಶ ಮತ್ತು ಅದರ ಪ್ರಯೋಜನಗಳ ಕುರಿತು ವಿವರಿಸಿದ

ರಸಪ್ರಶ್ನೆ, ಗಟ್ಟಿ ಓದು, ಕಥೆ ಹೇಳುವದು,ಕೈ ಬರಹ ಸ್ಪರ್ಧೆ, ಮೋಜಿನ ಗಣಿತ, ಸ್ಮರಣ ಶಕ್ತಿ ಪರೀಕ್ಷೆ, ಸೆಲ್ವಿ ಕಾರ್ನರ್ ಮುಂತಾದ ವಿಭಿನ್ನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಸಿ.ಆರ್.ಪಿ ಸಂಜು ಹುಬ್ಬಳ್ಳಿ ಬಹುಮಾನ ಹಾಗೂ ಪ್ರಮಾಣ ಪತ್ರಗಳ ವಿತರಣೆ ನೆರವೇರಿಸಿದರು.
ಈ ವೇಳೆ ಕಿತ್ತೂರು ತಾಲೂಕು BRT ಡಿ.ಎಚ್. ಪಾಟೀಲ, BRP ಲಕ್ಕಪ್ಪ ಕುರುಬೆಟ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ತೋಪಗಾನಿ, ಕುಲವಳ್ಳಿ ಗ್ರಾಮ ಪಂಚಾಯತ ಸದಸ್ಯ ಮಹಾಂತೇಶ ಎಮ್ಮಿ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಹುಸೇನ್ ಸಾಬ ಮಕಾನದಾರ, ಶಾಲೆಯ ಮುಖ್ಯೋಪಾದ್ಯಾಯ ಎಂ.ಕೆ. ಬುಲಬುಲೆ, ಸಮಸ್ತ ಶಿಕ್ಷಕ ವೃಂದ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
ಶಿಕ್ಷಕರು, ಎಸ್ ಡಿ ಎಂ ಸಿ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಮತ್ತು ಊರಿನ ನಾಗರಿಕರು ಮಕ್ಕಳ ಕಲಿಕೆಗೆ ನೂತನ ಮಾರ್ಗದರ್ಶನ ನೀಡಿದ ಈ ಹಬ್ಬದ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.