ಚನ್ನಮ್ಮನ ಕಿತ್ತೂರು, ಜನವರಿ 26: ಹುಬ್ಬಳ್ಳಿ ಮೂಲದ ಇಬ್ಬರು ಕಿತ್ತೂರು ಪಟ್ಟಣದ ಸಮೀಪದಲ್ಲಿರುವ ಡೊಂಬರಕೊಪ್ಪದ ಬಳಿ ರಸ್ತೆ ಅಪಘಾತದಲ್ಲಿ ಭೀಕರವಾಗಿ ಮೃತಪಟ್ಟಿದ್ದಾರೆ.
ಮೃತ ಯುವಕರನ್ನು 18 ವರ್ಷದ ಮದನ್ ಮೇಟಿ ಮತ್ತು 19 ವರ್ಷದ ರಮೇಶ್ ಅಂಬಿಗೇರ ಎಂದು ಗುರುತಿಸಲಾಗಿದೆ. ಖಾನಾಪುರದ ನಂದಗಡದಲ್ಲಿರುವ ರಾಯಣ್ಣ ಸಮಾಧಿ ನೋಡಿಕೊಂಡು ಮರಳಿ ಹುಬ್ಬಳ್ಳಿ ಕಡೆಗೆ ತೆರಳುವಾಗ ಡೊಂಬರಕೊಪ್ಪದ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ.
ಇನ್ನೊಂದೆಡೆ ಪಟ್ಟಣದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದ ಬಳಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಲಾರಿ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟಿದ್ದಾನೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿಲು ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ಮೃತ ವ್ಯಕ್ತಿಯನ್ನು ನಿಪ್ಪಾಣಿ ತಾಲೂಕಿನ ಅಕ್ಕೊಳದ ಅಮಿತ್ ಶಿಂಧೆ ಎಂದು ಗುರುತಿಸಲಾಗಿದೆ.
ಈ ಎರಡೂ ಘಟನೆಗಳ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.