ಚನ್ನಮ್ಮನ ಕಿತ್ತೂರು: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೂತನ ವ್ಯವಸ್ಥಾಪಕರಾಗಿ ಎಂ.ಎನ್ ಗಡೆನ್ನವರ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕದ ಮಾತನಾಡಿ ಇಂದು ನಮ್ಮ ಕಚೇರಿಗೆ ವ್ಯವಸ್ಥಾಪಕಾರಾಗಿ ಅಧಿಕಾರ ಸ್ವೀಕರಿಸಿದ ಎಂ.ಎನ್ ಗಡೆನ್ನವರ ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಅವರು ಯಾವುದೇ ಕೆಲಸವನ್ನು ಮಾಡಿದರು ಕಾಳಜಿ ಮತ್ತು ಶ್ರದ್ಧೆ ಇಟ್ಟುಕೊಂಡು ಮಾಡುತ್ತಾರೆ ಇಂತಹ ಅಧಿಕಾರಿ ನಮ್ಮಲ್ಲಿ ಬಂದಿದ್ದು ನಮಗೆಲ್ಲ ಸಂತೋಷವಾಗಿದ್ದು ಇವರ ಮಾರ್ಗದರ್ಶನದಲ್ಲಿ ನಾವೆಲ್ಲರು ನಡೆಯೋಣ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈಶ್ವರ ಉಪರಿ ಮಾತನಾಡಿ ಒಬ್ಬ ಶಿಕ್ಷಕನ ಸೇವೆ ಮತ್ತು ವೇತನಕ್ಕೆ ಸಂಬಂಧಪಟ್ಟ ಕೆಲಸಗಳು ಯಾವುದೇ ತರಹದ ತೊಂದರೆಗಳು ಆಗದೇ ಸರಿಯಾಗಿ ನಡೆದರೆ ಆ ಶಿಕ್ಷಕ ವರ್ಗಕೋಣೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ನೀಡಬಲ್ಲ. ಅಂತಹ ಅನೇಕ ಶಿಕ್ಷಕರ ಸಮಸ್ಯಗಳನ್ನು ಬಗೆ ಹರಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅನುವು ಮಾಡಿಕೊಟ್ಟ ಎಂ.ಎನ್ ಗಡೆನ್ನವರ ಅವರು ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವ್ಯವಸ್ಥಾಪಕರಾಗಿ ಆಗಮಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯ ಎಂದ ಅವರು ಎಚ್ಆರ್ ಎಮ್ ಎಸ್ ನಲ್ಲಿ ಕೆಲವು ತೊಂದರೆಗಳು ಹಾಗೆ ಉಳಿದಿದ್ದು ಅವುಗಳಿಗೆ ಹೆಚ್ಚಿನ ಒತ್ತು ಕೊಟ್ಟು ಆಗಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ನೂತನ ವ್ಯವಸ್ಥಾಪಕರಲ್ಲಿ ವಿನಂತಿ ಮಾಡಿಕೊಂಡರು.
ಈ ವೇಳೆ ನಿವೃತ್ತ ಮುಖ್ಯೋಪಾಧ್ಯಯ ಹಾಗೂ ಹಾಲಿ ಪಪ ಸದಸ್ಯ ಎಂ. ಎಫ್. ಜಕಾತಿ ಮಾತನಾಡಿದರು. ಪ್ರೌಡಶಾಲಾ ವಿಭಾಗದ ಬಿಆರ್ಸಿ ಎಂ.ವೈ. ಕಡಕೋಳ ನಿರೂಪಣೆ ಮಾಡಿ ವಂದನಾರ್ಪಣೆ ಮಾಡಿದರು.
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಅನ್ನಪ್ಪ ಮರಕಟ್ಟಿ, ಕಿತ್ತೂರು ತಾಲೂಕಾ ಉಪಾಧ್ಯಕ್ಷೆ ಸುನಂದಾ ಪಾಟೀಲ ಹಾಗೂ ರಾಜೇಶ್ವರಿ ಸೇಬಣ್ಣವರ, ಕಾರ್ಯಾಧ್ಯಕ್ಷ ಬಸವರಾಜ ಗಡೆನ್ನವರ, ಪ್ರದಾನ ಗುರುಗಳ ಸಂಘದ ಅಧ್ಯಕ್ಷೆ ಶೀರಿನಾಬಾನು ಸೌದಾಗರ, ಎಸ್ ಎಮ್, ಶಾಪೂರಮಠ, ಸಚಿನ ಇಟಗಿ, ಶಿವು ಕೆಂಗೇರಿ ಸೇರಿದಂತೆ ವಿವಿಧ ಶಾಲಾ ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ ಸಿಬ್ಬಂದಿಗಳು ಇದ್ದರು.