ಮುಖ್ಯಾಂಶಗಳು
- ಎಸ್. ಎಸ್. ಎಲ್.ಸಿ. ವಿದ್ಯಾರ್ಥಿಗಳಿಗೆ ನೇರ ಪೋನ್ ಇನ್ ಕಾರ್ಯಕ್ರಮ.
- ಡಿಸೆಂಬರ 28 ರಂದು ಮದ್ಯಾಹ್ನ 2.30 ರಿಂದ 5.30 ರ ವರೆಗೆ ನಡೆಯಲಿದೆ.
- ವಿಷಯವಾರು ಸಂದೇಹಗಳಿಗೆ ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ.
- ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ನುರಿತ ಶಿಕ್ಷಕರಿಂದ ಮಾರ್ಗದರ್ಶನ.
- ವಿಷಯವಾರು ಕ್ಲಿಷ್ಟಾಂಶಗಳು ಹಾಗೂ ಅತೀ ಹೆಚ್ಚು ಅಂಕಗಳಿಸುವ ವಿಧಾನಗಳ ಕುರಿತು ತಿಳುವಳಿಕೆ.
ಚನ್ನಮ್ಮನ ಕಿತ್ತೂರು: ಪ್ರಸಕ್ತ ಸಾಲಿನ ಎಸ್. ಎಸ್. ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶ ಸುಧಾರಣೆಯ ಹಿತದೃಷ್ಠಿಯಿಂದ ಪ್ರಪ್ರಥಮವಾಗಿ ಡಿಸೆಂಬರ್ 28 ರ ಶನಿವಾರ ಮದ್ಯಾಹ್ನ 2.30 ರಿಂದ 5.30 ರ ವರೆಗೆ ಚನ್ನಮ್ಮನ ಕಿತ್ತೂರು ಹೊಸ ಪ್ರೌಢ ಶಾಲೆಯಲ್ಲಿ ನೇರ ಪೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕದ ಅವರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ಮತ್ತು ನುರಿತ ಶಿಕ್ಷಕ ಶಿಕ್ಷಕಿಯರು ಆಯಾ ವಿಷಯಕ್ಕೆ ಸಂಬಂಧಿಸಿದ ಸಂದೇಹಗಳ ಪರಿಹಾರ, ಪಠ್ಯಕ್ರಮದ ಮಾರ್ಗದರ್ಶನ, ಪರೀಕ್ಷಾ ಪೂರ್ವ ತಯಾರಿ ಜೊತೆಗೆ ಅತೀ ಹೆಚ್ಚು ಅಂಕಗಳಿಸುವ ವಿಧಾನಗಳ ಕುರಿತು ಮಾರ್ಗದರ್ಶನ ಮಾಡಲಿದ್ದು ತಾಲೂಕಿನ ಎಲ್ಲ ಎಸ್. ಎಸ್. ಎಲ್.ಸಿ. ವಿದ್ಯಾರ್ಥೀಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕದ ಮನವಿ ಮಾಡಿದ್ದಾರೆ.
ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಈ ಕೆಳಕಂಡ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ.
ಕನ್ನಡ ವಿಷಯಕ್ಕಾಗಿ ದೇವಗಾಂವ ಎಸ್.ಟಿ.ಎ ಪ್ರೌಢ ಶಾಲೆಯ ಶಿಕ್ಷಕ ಶ್ರೀಶೈಲ್ ಅಂಗಡಿ-9448895525, ಕಾದರವಳ್ಳಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಡಾ. ಗಜಾನಂದ ಸೊಗಲನ್ನವರ-9591308406 ಹಾಗೂ ಬೈಲೂರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಂಜುನಾಥ ಕಳಸನ್ನವರ-9972508745 ಇವರುಗಳಗೆ ಕರೆ ಮಾಡಲು ಕೋರಲಾಗಿದೆ.
ಇಂಗ್ಲೀಷ ವಿಷಯಕ್ಕಾಗಿ ಎಂ.ಕೆ. ಹುಬ್ಬಳ್ಳಿ ಎಸ್.ಕೆ.ಪಿ.ಯು ಕಾಲೇಜಿನ ಶಿಕ್ಷಕ ಸಿ ಕೆ ಗುರವನ್ನವರ-9902712559, ಚನ್ನಮ್ಮನ ಕಿತ್ತೂರು ಸರ್ಕಾರಿ ಭಾಲಕಿಯರ ಪ್ರೌಢ ಶಾಲೆಯ ಶಿಕ್ಷಕ ಆರ್ ಪ್ರಮೋದಸ್ವಾಮಿ-9880262225 ಹಾಗೂ ಚನ್ನಮ್ಮನ ಕಿತ್ತೂರು ಸರ್ಕಾರಿ ಉರ್ದು ಪ್ರೌಢ ಶಾಲೆಯ ಶಿಕ್ಷಕ ಮಹಬೂಬ್ ಮೂಲ್ತಾನಿ-9538650944 ಇವರುಗಳಗೆ ಕರೆ ಮಾಡಲು ಕೋರಲಾಗಿದೆ.
ಹಿಂದಿ ವಿಷಯಕ್ಕಾಗಿ ಕತ್ರಿದಡ್ಡಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಉಜ್ವಲಾ ಪಾಟೀಲ-9611520941 ಹಾಗೂ ಎಂ.ಕೆ. ಹುಬ್ಬಳ್ಳಿ ಕುವೆಂಪು ಪ್ರೌಢ ಶಾಲೆಯ ಶಿಕ್ಷಕ ಆರ್. ಕೆ. ಕರಲಕಟ್ಟಿ-9743585889 ಇವರುಗಳಗೆ ಕರೆ ಮಾಡಲು ಕೋರಲಾಗಿದೆ.
ಗಣಿತ ವಿಷಯಕ್ಕಾಗಿ ಕಲಭಾಂವಿ ಅಕ್ಷಯ ಟ್ರಸ್ಟ್ ಪ್ರೌಢ ಶಾಲೆಯ ಶಿಕ್ಷಕ ಐ ಬಿ ತುರಮರಿ-6361231950, ಚನ್ನಮ್ಮನ ಕಿತ್ತೂರು ಸರ್ಕಾರಿ ಭಾಲಕಿಯರ ಪ್ರೌಢ ಶಾಲೆಯ ಶಿಕ್ಷಕ ಕೆ ಎನ್ ಮುಲ್ಲಾ-8867546198 ಹಾಗೂ ಹಿರೇನಂದಿಹಳ್ಳಿ ಪ್ರೌಢ ಶಾಲೆಯ ಶಿಕ್ಷಕಿ ಭುವನೇಶ್ವರಿ ಹಿರೇಮಠ-9739075145 ಇವರುಗಳಗೆ ಕರೆ ಮಾಡಲು ಕೋರಲಾಗಿದೆ.
ವಿಜ್ಞಾನ ವಿಷಯಕ್ಕಾಗಿ ಚನ್ನಮ್ಮನ ಕಿತ್ತೂರು ಹೊಸ ಪ್ರೌಢ ಶಾಲೆಯ ಶಿಕ್ಷಕ ಎನ್ ಜಿ ನಾಯಕ-9980591561, ತಿಗಡೊಳ್ಳಿ ಭರತೇಶ ಪ್ರೌಢ ಶಾಲೆಯ ಶಿಕ್ಷಕ ಬಿ ಎ ಕಾತಗಾರ-9900683923, ತುರಕರಶೀಗಿಹಳ್ಳಿ ಪ್ರೌಢ ಶಾಲೆಯ ಶಿಕ್ಷಕ ಎಸ್.ಜಿ ಕುಂಬಾರ-9113917380 ಇವರುಗಳಗೆ ಕರೆ ಮಾಡಲು ಕೋರಲಾಗಿದೆ.
ಸಮಾಜ ವಿಷಯಕ್ಕಾಗಿ ಹಿರೇನಂದಿಹಳ್ಳಿ ಪ್ರೌಢ ಶಾಲೆಯ ಶಿಕ್ಷಕ ರಾಜಶೇಖರ ರಗಟಿ-9731716168, ವೀರಾಪೂರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಆನಂದ ಬಂಕಾಪೂರ-7760135881, ಚನ್ನಮ್ಮನ ಕಿತ್ತೂರು ಸರ್ಕಾರಿ ಭಾಲಕಿಯರ ಪ್ರೌಢ ಶಾಲೆಯ ಶಿಕ್ಷಕ ಸುರೇಶ ಟಂಟಕನ್ನವರ-9844248452 ಹಾಗೂ ಖೋದಾನಪೂರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಂಜುನಾಥ ಕರಿಸಿದ್ಧನವರ- 8746882667 ಇರುಗಳ ದೂರವಾಣಿ ಸಂಖ್ಯೆಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಕರೆ ಮಾಡಿ ಪರೀಕ್ಷೆಯನ್ನು ಎದುರಿಸುವ ಬಗೆ, ವಿಷಯವಾರು ಕ್ಲಿಷ್ಟಾಂಶಗಳು ಹಾಗೂ ಅತೀ ಹೆಚ್ಚು ಅಂಕಗಳಿಸುವ ವಿಧಾನಗಳ ಕುರಿತು ತಿಳಿದದುಕೊಳ್ಳಬೇಕು ಮತ್ತು ನೇರ ಪೋನ್ ಇನ್ ಕಾರ್ಯಕ್ರಮ ಕುರಿತು ಹೆಚ್ಚಿನ ಮಾಹತಿಗಾಗಿ ಹಿರೇ ನಂದಿಹಳ್ಳಿ ಪ್ರೌಡಶಾಲೆಯ ಮುಖ್ಯೋಪಾದ್ಯಯ ಬಸವರಾಜ ಬಿದರಿ(9741264580) ಮತ್ತು ಎಮ್ ವೈ ಕಡಕೋಳ (94493 84053) ಇವರನ್ನು ಸಂಪರ್ಕ ಮಾಡಲು ಮನವಿ ಮಾಡಿದ್ದಾರೆ.