ಚನ್ನಮ್ಮನ ಕಿತ್ತೂರು: ಮಂಗಳವಾರ ಬೆಳಗಾವಿ-ಧಾರವಾಡ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್-48 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.ಅಪಘಾತಕ್ಕೆ ಕಾರಣವಾದ ಕಾರು ಕಾಗವಾಡ ಶಾಸಕ ರಾಜು ಕಾಗೆ ಅವರ ಸಹೋದರನ ಮಗನ ಕಾರು ಎಂದಿ ತಿಳಿದುಬಂದಿದೆ.
ಬೆಳಿಗ್ಗೆ 8:30 ಸುಮಾರಿಗೆ, ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮದ ಸಣ್ಣವಿಠ್ಠಲ ಗೋವಿಂದಪ್ಪ ದುರದುಂಡಿ ತನ್ನ ಮೋಟಾರ್‌ಸೈಕಲ್‌ನಲ್ಲಿ ಇಬ್ಬರನ್ನು ಕೂಡಿಸಿಕೊಂಡು ಸಾಗುತ್ತಿದ್ದನು. ಅವರು ಕಿತ್ತೂರು ಸರ್ವಿಸ್ ರಸ್ತೆಗೆ ಹೋಗಲು ನಿಧಾನಿಸಿದಾಗ, ವೇಗ ಮತ್ತು ನಿಷ್ಠಾಳಜಿಯಿಂದ ಸಾಗುತ್ತಿದ್ದ KA-23-MD-9119 ನಂಬರಿನ ಎಮ್.ಜಿ. ಗ್ಲೋಸ್ಟರ್ ಕಾರು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದೆ.

ಅಪಘಾತದ ಪರಿಣಾಮ, ಸಣ್ಣವಿಠ್ಠಲ ಅವರ ಎಡ ಕೈಗೆ ಗಾಯವಾಗಿದ್ದು, ಮಧ್ಯದ ಸೀಟ್‌ನಲ್ಲಿ ಕುಳಿತಿದ್ದ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ನಿಂಗಪ್ಪ ವಿಠಲ ಹೆಬ್ಬಾಳ ಅವರ ಎಡ ಮೊಣಕಾಲಿಗೆ ಗಂಭೀರ ಗಾಯವಾಗಿದೆ. ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ಬಸವರಾಜ ರಾಮಪ್ಪ ತಳಕಟನಾಳ (ಮೃತ) ಅವರು ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಚನ್ನಮ್ಮನ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪಿಎಸ್‌ಐ ಪ್ರವೀಣ ಗಂಗೋಳ ತಿಳಿಸಿದ್ದಾರೆ.