Home ಸ್ಥಳೀಯ ಕಿತ್ತೂರಿನ ಐತಿಹಾಸಿಕ ನೆಲೆಗಟ್ಟಿನಲ್ಲಿ ವಿಜಯೋತ್ಸವ ಮತ್ತು ಕೋಟೆ ಸಂರಕ್ಷಣೆ: ಸಚಿವ ಕೃಷ್ಣಭೈರೇಗೌಡ

ಕಿತ್ತೂರಿನ ಐತಿಹಾಸಿಕ ನೆಲೆಗಟ್ಟಿನಲ್ಲಿ ವಿಜಯೋತ್ಸವ ಮತ್ತು ಕೋಟೆ ಸಂರಕ್ಷಣೆ: ಸಚಿವ ಕೃಷ್ಣಭೈರೇಗೌಡ

0
ಕಿತ್ತೂರಿನ ಐತಿಹಾಸಿಕ ನೆಲೆಗಟ್ಟಿನಲ್ಲಿ ವಿಜಯೋತ್ಸವ ಮತ್ತು ಕೋಟೆ ಸಂರಕ್ಷಣೆ: ಸಚಿವ ಕೃಷ್ಣಭೈರೇಗೌಡ

ಚನ್ನಮ್ಮನ ಕಿತ್ತೂರು, ಅಕ್ಟೋಬರ್ 08: ಮೈಸೂರಿನ ಇತಿಹಾಸ ಆಧಾರದಲ್ಲಿ ದಸರಾ ಹಾಗೂ ಅರಮನೆಯ ಅಭಿವೃದ್ಧಿಗೆ, ಕಿತ್ತೂರಿನ ಇತಿಹಾಸ ಆಧಾರದಲ್ಲಿ ವಿಜಯೋತ್ಸ, ಕೋಟೆ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಕೋಟೆ ಆವರಣ, ವಸ್ತು ಸಂಗ್ರಹಾಲಯ ವಿಜಯೋತ್ಸವದ ಮುಖ್ಯ ವೇದಿಕೆಯನ್ನು ವೀಕ್ಷಿಸಿದ ಸಚಿವ ಭೈರೇಗೌಡ ಕೋಟೆಯ ಸಂರಕ್ಷಣೆ ಮತ್ತು ವಸ್ತು ಸಂಗ್ರಹಾಲಯದ ಅಭಿವೃದ್ಧಿ ಒಳಗೊಂಡಂತೆ ಸುಮಾರು 14 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗಾಗಿ ಚಾಲನೆ ನೀಡಿದರು.

ನಂತರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಭೈರೇಗೌಡ ನಾಡು, ನುಡಿ, ಇತಿಹಾಸ, ಕೋಟೆ ಕೊತ್ತಲಗಳನ್ನು ಸಂರಕ್ಷಣೆ ಮಾಡುವುದರಲ್ಲಿ ಸರ್ಕಾರ ಬರೀ ಭಾಷಣ ಮಾಡುವುದಿಲ್ಲ, ವೈಜ್ಞಾನಿಕವಾಗಿ ಅಭಿವೃದ್ಧಿಗೊಳಿಸಲು ಅಗತ್ಯ ಅನುದಾನವನ್ನೂ ಬಿಡುಗಡೆಗೊಳಿಸುತ್ತಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here