spot_img
Thursday, April 17, 2025
spot_imgspot_imgspot_imgspot_img
spot_img

Top 5 This Week

spot_img

Related Posts

‘ಕನ್ನಡ ಗಡಿ ತಿಲಕ’ ಹಾಗೂ ‘ಜನ್ನಾ ಸನದಿ’ ಪ್ರಶಸ್ತಿ ಪ್ರದಾನ! ಸನದಿ ಪ್ರತಿಷ್ಠಾನದಿಂದ ಯುವ ಬರಹಗಾರರಿಗೆ ಗೌರವ; ಈ ಬಾರಿ ಎಲ್.ವಿ.ಪಾಟೀಲ, ವೀರೇಶ ಕುರಿ ಆಯ್ಕೆ!

ಬೆಳಗಾವಿ, ನವೆಂಬರ್ 30: ಡಾ.ಬಿ.ಎ.ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿ ಇವರು ನಾಡಿನ ಕನ್ನಡ ಪರ ಚಿಂತಕರು ನಾಡು ನುಡಿಯ ಸೇವೆ ಸಲ್ಲಿಸುತ್ತಿರುವ ಹಿರಿಯರನ್ನು ಗುರುತಿಸಿ ‘ಕನ್ನಡ ಗಡಿ ತಿಲಕ’ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯದ ಯುವ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಸಾಹಿತಿಗಳ ಕೃತಿಗಳನ್ನು ಆಯ್ಕೆ ಮಾಡಿ ‘ಜನ್ನಾ ಸನದಿ’ ಪ್ರಶಸ್ತಿಯನ್ನು ನೀಡುತ್ತ ಬರಲಾಗುತ್ತಿದೆ.


೨೦೨೪ನೇ ಸಾಲಿನ ಕನ್ನಡ ಗಡಿತಿಲಕ ಪುರಸ್ಕಾರಕ್ಕೆ ಈ ಬಾರಿ ನಿವೃತ್ತ ಪ್ರಾಧ್ಯಾಪಕರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟಕರು ಆಗಿರುವ ಎಲ್.ವಿ.ಪಾಟೀಲ ಅವರನ್ನು ಆಯ್ಕೆ ಮಾಡಿ ಜನ್ನಾ ಸನದಿ ಯುವ ಸಾಹಿತ್ಯ ಪ್ರಶಸ್ತಿಗೆ ಕೊಪ್ಪಳದ ಯುವ ಕವಿ ಶಿಕ್ಷಕ ವೀರೇಶ ಕುರಿ ಅವರ ಮಿಠಾಯಿ ಮಾಮಾ ಕೃತಿ ಆಯ್ಕೆಯಾಗಿದ್ದು ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಸಾಧಕರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.


ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದರು. ಗಡಿತಿಲಕ ಪ್ರಶಸ್ತಿ ಪುರಸ್ಕೃತ ಎಲ್.ವಿ.ಪಾಟೀಲ ಅವರು ಮಾತನಾಡಿ ನಲವತ್ತು ವರ್ಷಗಳ ಕನ್ನಡದ ಸೇವೆಗೆ ಸಂದಿರುವ ಈ ಪ್ರಶಸ್ತಿಯನ್ನು ಈ ವರೆಗೂ ನನ್ನನ್ನು ಹಾರೈಸಿ ಬೆಳೆಸಿದ ನಿಡಸೋಸಿ ಶ್ರೀಮಠಕ್ಕೆ ಅರ್ಪಿಸುತ್ತೇನೆ ಎಂದರು.


ಪಿ.ಜಿ.ಕೆಂಪಣ್ಣವರ ಅಭಿನಂದನಾ ಪರ ನುಡಿಗಳನ್ನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಗಾರ್ಗಿ ಪ್ರಾಸ್ಣಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಎಸ್.ಎಂ.ಕುಲಕರ್ಣಿ, ಬಿ.ಎಸ್.ಗವಿಮಠ, ಎಂ.ಎ.ಸನದಿ, ಶ್ರೀಶೈಲ ಬನಶಂಕರಿ, ಸರಜೂ ಕಾಟ್ಕರ್, ಬಸವರಾಜ ಜಗಜಂಪಿ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

कोई जवाब दें

कृपया अपनी टिप्पणी दर्ज करें!
कृपया अपना नाम यहाँ दर्ज करें

Popular Articles