spot_img
Monday, February 24, 2025
spot_imgspot_imgspot_imgspot_img
spot_img

Top 5 This Week

spot_img

Related Posts

ಐಪಿಎಲ್ ಮಾದರಿಯ ಪ್ರೀಮಿಯರ್ ಲೀಗ್ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು

ಚನ್ನಮ್ಮನ ಕಿತ್ತೂರು: ತಾಲೂಕಿನ ಹುಣಸಿಕಟ್ಟಿಯಲ್ಲಿ ಗ್ರಾಮದ ಹಿರಿಯರು ಹಾಗೂ ಗೆಳೆಯರ ಬಳಗದ ವತಿಯಿಂದ ಪ್ರಪ್ರಥಮ ಬಾರಿಗೆ ಐಪಿಎಲ್ ಮಾದರಿಯ “ಹುಣಸಿಕಟ್ಟಿ ಪ್ರೀಮಿಯರ್ ಲೀಗ್” ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ದಾವಣಗೆರೆ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ ಅವರು “ಹುಣಸಿಕಟ್ಟಿ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್‌ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ಇಂದಿನ ಯುವಕರು ದುಶ್ಚಟಗಳಿಂದ ಮುಕ್ತರಾಗಿ ಕ್ರೀಡಾಮನೋಭಾವನೆ ಬೆಳೆಸಿಕೊಂಡು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗ್ರಾಮಕ್ಕೆ ಮತ್ತು ದೇಶಕ್ಕೆ ಮಾದರಿಯಾಗಬೇಕು ಎಂಬ ಮುಖ್ಯ ಉದ್ದೇಶ ಇಟ್ಟಕೊಂಡು “ಹುಣಸಿಕಟ್ಟಿ ಪ್ರೀಮಿಯರ್ ಲೀಗ್” ಅನ್ನು ಮಾಡಲಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಚನ್ನಬಸಪ್ಪ ಮೊಕಾಶಿ ಅವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ ಗ್ರಾಮೀಣ ಮಟ್ಟದ ಕ್ರೀಡಾಪಟುಗಳಿಗೆ ಹೆಚ್ಚಿನ ಸಹಾಯ ನೀಡಬೇಕು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಇಂತಹ ಕ್ರೀಡಾಕೂಟ ಮತ್ತು ಕ್ರೀಡಾ ಕಾರ್ಯಕ್ರಮಗಳಿಗೆ ಹೆಚ್ಚಿನ ನೆರವು ನೀಡಿದರೆ, ನಮ್ಮ ಗ್ರಾಮೀಣ ಭಾಗದ ಪ್ರತಿಭೆಗಳು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ಹೊಳಿ, ಬೆಳಗಾವಿ ಕೃಷಿ ಅಧಿಕಾರಿ ಪ್ರಭಾಕರ ಕ ಇಟ್ನಾಳ , ಧಾರವಾಡ ಕೆ.ಎ. ಎ.ಸ್. ಅಧಿಕಾರಿ ಉಮೇಶ ಹೊಸಮನಿ, ಮಾಜಿ ಎಪಿಎಂಸಿ ಸದಸ್ಯ ರುದ್ರಪ್ಪ ಅಂಗಡಿ,  ಬೈಲಹೊಂಗಲ ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಕ ಅಶೋಕ  ಯರಗೊಪ್ಪ,  ಬಂಗಾರದ ವ್ಯಾಪಾರಸ್ಥ ಉದಯ ಪತ್ತಾರ, ಶಿಕ್ಷಕ ಶೌಕತ್ ಅಲಿ   ನದಾಫ ಆಗಮಿಸಿದ್ದರು

ಒಟ್ಟು ಆರು ತಂಡಗಳನ್ನು ರಚನೆ ಮಾಡಲಾಗಿದೆ ಪ್ರತಿ ಭಾನುವಾರ ಆಟ ಆಡಿಸಲಾಗುತ್ತದೆ. ಹುಣಸಿಕಟ್ಟಿ ಪ್ರೀಮಿಯರ್ ಲೀಗನಲ್ಲಿ ಡಾಕ್ಟರ್ ಬಿ ಎಚ್ ಜಮಾದಾರ ಒಡೆತನದ ಹುಣಸಿಕಟ್ಟಿ ಸೂಪರ್ ಲೈನ್ಸ್ ತಂಡ, ಮಹಾಂತೇಶ್ ಇಟ್ನಾಳ ಒಡೆತನದ ಹುಣಸಿಕಟ್ಟಿ ಮಾಸ್ಟರ್ ಮೈಂಡ್ ತಂಡ, ಬಸವರಾಜ ಮೊಕಾಶಿ ಒಡೆತನದ ಹುಣಸಿಕಟ್ಟಿ ರಾಯಣ್ಣ ರಾಕರ್ಸ್ ತಂಡ, ಕಲ್ಮೇಶ ಮನ್ನಪ್ಪನವರ ಒಡೆತನದ ಹುಣಸಿಕಟ್ಟಿ ರಾಯಲ್ ಕಿಂಗ್ಸ್ ತಂಡ, ರುದ್ರೇಶ್ ಪತ್ತಾರ ಒಡೆತನದ ಹುಣಸಿಕಟ್ಟಿ ಆರ್ ಬಿ ಡಿ ತಂಡ ಹಾಗೂ ಕಲ್ಮೇಶ್ ಹುಬ್ಬಳ್ಳಿ ಒಡೆತನದ ಎ.ಕೆ ಸೌಂಡ್ಸ್ ತಂಡಗಳು ಭಾಗವಹಿಸಿದ್ದವು.

ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಪಟುಗಳು ಆಸಕ್ತಿಯಿಂದ ಮತ್ತು ಪ್ರತಿಭೆಯಿಂದ ಕೂಡಿದರೂ, ಸೂಕ್ತವಾದ ಅವಕಾಶಗಳ ಕೊರತೆಯಿಂದ ಬಡ ಕ್ರೀಡಾಪಟುಗಳು ಪ್ರತಿಭೆಯನ್ನು ಪ್ರದರ್ಶಿಸಲು ಪರದಾಡುತ್ತಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಗ್ರಾಮೀಣ ಮಟ್ಟದಲ್ಲಿ ಐಪಿಎಲ್ ಮಾದರಿಯ ಹುಣಸಿಕಟ್ಟಿ ಪ್ರೀಮಿಯರ್ ಲೀಗ್ ಕ್ರಿಡಾಕೂಟವನ್ನು ಆಯೋಜಿಸಲಾಗಿದೆ. ಬಿ, ಹೆಚ್.‌ ಜಮಾದಾರ ಸೂಪರ್ ಲೈನ್ಸ್ ತಂಡ ಮಾಲೀಕರು.ಮೀಣ ಮಟ್ಟದ ಕ್ರೀಡಾಪಟುಗಳಿಗೆ ನಮಗೆ ನಗರ ಮಟ್ಟದ ಸೌಲಭ್ಯಗಳು ಸಿಗುವುದಿಲ್ಲ ಆದರೆ ಗ್ರಾಮೀಣ ಮಟ್ಟದಲ್ಲಿ ನಡೆಯುವ ಇಂತಹ ಕ್ರಿಡಾಕೂಟಗಳು ಗ್ರಾಮೀಣ ಮಟ್ಟದ ಕ್ರೀಡಾಪಟುಗಳ ಕನಸುಗಳನ್ನು ಸಾಕಾರಗೊಳಿಸಲು ಸಹಕಾರಿಯಾಗುತ್ತವೆ. ಸ್ಥಳೀಯ ಯುವ ಕ್ರಿಡಾಪಟು  ತಮ್ಮ ಅನುಭವ ಹಂಚಿಕೊಂಡು ಆಯೋಜಕರಿಗೆ ಧನ್ಯವಾದಗಳನ್ನು ತಿಳಿಸಿದರು.

ಈ ವೇಳೆ ನಿರ್ವಹಣಾ ಕಮಿಟಿಯ ಎನ್.ಬಿ ಇಟ್ನಾಳ, ಎ.ವೈ. ಹಾಜಿ, ಎಸ್.‌ ಎಸ್ ಬೈರನಟ್ಟಿ, ಎಸ್.‌ ಎಸ್ ಅಂಗಡಿ, ಎಸ್.‌ ಕೆ. ಕಾಜಗಾರ, ಎಂ. ಜೆ ಹಿರೇಮಠ, ಜಿ. ಡಿ. ಹಿರೇಮಠ, ಜಿ. ಎಂ. ಸಂಗನವರ,ಆರ್.‌ ಎನ್. ಹಂಚಿನಮನಿ, ಕೆ.ಬಿ. ಗಂಗಾಳದ ಸೇರಿದಂತೆ ಗ್ರಾಮಸ್ಥರು ಮತ್ತು ಕ್ರೀಡಾಪಟುಗಳು ಇದ್ದರು.

कोई जवाब दें

कृपया अपनी टिप्पणी दर्ज करें!
कृपया अपना नाम यहाँ दर्ज करें

Popular Articles