ಬೆಳಗಾವಿ, ನವೆಂಬರ್ 23: ಉದಯವಾಗಲಿ ಚಲುವ ಕನ್ನಡ ನಾಡು ಕರ್ನಾಟಕದ ಏಕೀಕರಣಕ್ಕೆ ಮುನ್ನುಡಿ ಬರೆದರೆ ಡಾ ಡಿ ಎಸ್ ಕರ್ಕಿಯವರ ಹಚ್ಚೇವು ಕನ್ನಡದ ದೀಪ ಕವಿತೆ ಅದಕ್ಕೆ ಶಕ್ತಿ ತುಂಬಿ ಏಕೀಕರಣದ ಕೂಗು ಬಲಗೊಳ್ಳಲು ಕಾರಣವಾಯಿತು ಬೆಳಗಾವಿಯಂತಹ ಮರಾಠಿಮಯ ನೆಲದಲ್ಲಿ ಕವಿ ಈ ಕವಿತೆ ರಚಿಸಿದ್ದನ್ನು ನಾವು ಗಮನಿಸಬೇಕು ಡಾ ಡಿ ಎಸ್ ಕರ್ಕಿಯವರುಕಟ್ಟಿಕೊಟ್ಟ ಈ ಕವಿತೆ ಎಲ್ಲೆಲ್ಲಿ ಕನ್ನಡಿಗರಿದ್ದಾರೊ ಅಲ್ಲೆಲ್ಲ ಮೊಳಗುತ್ತಲೆ ಇರುತ್ತದೆ ಅದು ಗಡಿನಾಡೆ ಇರಲಿ ನಡುನಾಡೆ ಇರಲಿ ದೇಶವೆ ಇರಲಿ ವಿದೇಶವೆ ಇರಲಿ ಅದು ಕನ್ನಡಿಗರ ಧೇಯಗೀತೆಯಾಗಿ ಕನ್ನಡಿಗರನ್ನು ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಲೆ ಇರುತ್ತದೆ ಎಂದು ಗದುಗಿನ ಡಾ ತೋಂಟದ ಸಿದ್ದರಾಮ ಶ್ರೀಗಳು ನುಡಿದರು.
ಅವರು ಬೆಳಗಾವಿ ಯ ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನದ ೨೦೨೪ ನೇ ಸಾಲಿನ ಕರ್ಕಿ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತಿದ್ದರು. ಇಂತಹ ಲೋಕಮಾನ್ಯ ಕವಿ ನಮ್ಮ ಬೆಳಗಾವಿಯವರು ಎಂಬುದು ನಮಗೆ ಹೆಮ್ಮೆಯ ವಿಷಯ ಕನ್ನಡ ಛಂದೋವಿಕಾಸ ದಂತಹ ಪ್ರಬುದ್ದ ಪ್ರಬಂಧ,ನಕ್ಷತ್ರ ಗಾನ,ಭಾವತೀರ್ಥ ಬಣ್ಣದ ಚಂಡು ದಂತಹ ಉತ್ಕೃಷ್ಟ ಸಾಹಿತ್ಯ ಕೊಟ್ಟ ಕವಿಗೆ ಸಿಗಬೇಕಾದ ಗೌರವ ಪುರಸ್ಕಾರಗಳು ಸಿಗದಿರಿವುದು ವಿಷಾದಕರ ಸಂಗತಿಅವರ ಹೆಸರಲ್ಲಿ ಅವರ ಕುಟುಂಬದ ಸದಸ್ಯರು ಅಭಿಮಾನಿಗಳು ಸೇರಿ ಪ್ರತಿಷ್ಠಾನದ ಮೂಲಕ ನಾಡಿನ ಹಿರಿಯ ಸಾಹಿತಿಗೆ ಕರ್ಕಿ ಕಾವ್ಯ ಶ್ರೀ ಪ್ರಶಸ್ತಿ ಕೊಡಲು ಮೊದಲು ಮಾಡಿರಿವುದು ಸ್ತುತ್ಯ ಕೆಲಸ ಈ ವರ್ಷ ನಾಡಿನ ಹಿರಿಯ ಮಕ್ಕಳ ಕ್ಷೇತ್ರದ ಸಾಹಿತಿ ಸಿಂದಗಿಯ ಹ ಮ ಪೂಜಾರರಿಗೆ ಸಂದಿರುವುದು ಯೋಗ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕರ್ಕಿಯವರು ಛಂದೋವಿಕಾಸ ಸಾಹಿತ್ಯ ಪ್ರವೇಶಿಸುವ ಪ್ರತಿಯೊಬ್ಬರಿಗೂ ಮಾರ್ಗಸೂಚಿಯಾಗಿದೆ ಕರ್ಕಿಯವರ ಕಾವ್ಯ ಕಲಿಸಿದ ನನಗೆ ಈ ಪ್ರಶಸ್ತಿ ದೊರಕಿರುವುದು ನನ್ನ ಭಾಗ್ಯ ಧಾರವಾಡದ ವಿದ್ಯಾವರ್ಧಕ ಸಂಘದ ಧರೆಗೆ ದೊಡ್ಡವರು ಮತ್ತು ಈ ಕರ್ಕಿ ಕಾವ್ಯಶ್ರೀ ಪ್ರಶಸ್ತಿಗಳು ನನ್ನ ಜೀವನದ ಬಹು ದೊಡ್ಡ ಪ್ರಶಸ್ತಿಗಳೆಂದು ಪ್ರಶಸ್ತಿ ಸ್ವೀಕರಿಸಿದ ಹ ಮ ಪೂಜಾರರು ನುಡಿದರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ ನಿರ್ಮಲಾ ಬಟ್ಟಲ ಡಾ ಕರ್ಕಿಯವರ ಕಾವ್ಯ ಚಿಂತನೆ ಕುರಿತು ಮಾತನಾಡಿದರು.
ಮುಖ್ಯ ಅತಿಥಿ ಹಿರಿಯ ಸಾಹಿತಿ ಪ್ರೊ ಎಂ ಎಸ್ ಇಂಚಲ ಕರ್ಕಿಯವರ ಜೊತೆಗಿನ ಮಧುರ ನೆನಪುಗಳನ್ನು ಹಂಚಿಕೊಂಡರು ಮಕ್ಕಳ ಸಾಹಿತಿ ಬಸವರಾಜ ಗಾರ್ಗಿ ಅಭಿನಂದನಪರ ನುಡಿಗಳನ್ನಾಡಿದರು ಅಶೋಕ ಉಳ್ಳೆಗಡ್ಡಿ ಪ್ರಾಸ್ಥಾವಿಕವಾಗಿ ಮಾತನಾಡಿದರು ಇದೆ ಸಂದರ್ಭದಲ್ಲಿ ಗಡಿನಾಡ ಚೇತನ ಪುರಸ್ಕೃತ ಪ್ರಾ ಬಿ ಎಸ್ ಗವಿಮಠರನ್ನು ಸನ್ಮಾನಿಸಿ ಅಭಿನಂದಿಸಲಾಯಿತು ಶಿವಪುತ್ರ ದು ಕರ್ಕಿ ಕಾರ್ಯಮದ ಅಧ್ಯಕ್ಷತೆಯ ವಹಿಸಿದ್ದರು.
ಸ ರಾ ಸುಳಕೂಡೆಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯಲ್ಲಿ ೨೦ ಕವಿಗಳು ಸ್ವರಚಿತ ಕವನ ಓದಿದರು ಗೌರಮ್ಮ ಕರ್ಕಿ ಸ್ವಾಗತಿಸಿದರು ರಮಾನಾಥ ಬನಶಂಕರಿ ವಂದಿಸಿದರು ಶಿಕ್ಷಕಿ ಮೀನಾಕ್ಷಿ ಕಾಮಕರ ನಿರೂಪಿಸಿದರು ಡಾ ಬಸವರಾಜ ಜಗಜಂಪಿ ಡಾ ಹೆಚ್ ಬಿ ಕೋಲಕಾರ ಡಾ ರಾಮಕೃಷ್ಣ ಮರಾಠೆ ಡಾ ಎಸ್ ಎ ಕರ್ಕಿ ಡಾ ಆನಂದ ಜಕ್ಕನ್ನವರ ಎಸ್ ಎಸ್ ಸಾತಿಹಾಳ, ಶಿವಶಿಂಪಿಗೇರ ವಿಜಯಾ ಕರ್ಕಿ ಆನಂದ್ ಕರ್ಕಿ ಜಗದೀಶ್ವರ ಪೂಜಾರ ಎಸ್ ಬಿ ನಾಗರಾಜ ಮತ್ತು ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನದ ಟ್ರಸ್ಟಿನ ಸದಸ್ಯರು ಅಭಿಮಾನಿಗಳು ಉಪಸ್ಥಿತರಿದ್ದರು