ಎಮ್. ಕೆ. ಹುಬ್ಬಳ್ಳಿ, ಡಿಸೆಂಬರ್ 24: ಇಂದು ಎಸ್.ವಿ. ಕುಲಕರ್ಣಿ ಸರಕಾರಿ ಪ್ರೌಢಶಾಲೆಯಲ್ಲಿ ರೈತ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವಿಶೇಷ ಸಂದರ್ಭಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಾವಯವ ರೈತ ಶ್ರೀ ಶಂಕರ ಲಂಗಟಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.ಕಾರ್ಯಕ್ರಮದಲ್ಲಿ ಶ್ರೀ ಶಂಕರ ಲಂಗಟಿ ಅವರು ವಿದ್ಯಾರ್ಥಿಗಳೊಂದಿಗೆ ಸಾವಯವ ಕೃಷಿ, ಅದರ ಮೌಲ್ಯವರ್ಧನೆಗೆ ಇರುವ ಅವಕಾಶಗಳು, ಹಾಗೂ ತಮ್ಮ ಯಶಸ್ವಿ ಕೃಷಿ ಪ್ರಯಾಣದ ಬಗ್ಗೆ ವಿವರವಾಗಿ ಚರ್ಚೆ ನಡೆಸಿದರು.
ವಿಶೇಷವಾಗಿ, ಸಿರಿಧಾನ್ಯಗಳ ಮಹತ್ವ, ಅವುಗಳ ಪೋಷಕಮೌಲ್ಯ ಹಾಗೂ ಆರೋಗ್ಯ ಲಾಭಗಳ ಬಗ್ಗೆ ದಿಟ್ಟ ಸಂದೇಶವನ್ನು ನೀಡಿದರು.ಸಹಜ ಸಮೃದ್ದಿ ಮತ್ತು ಸಾವಯವ ಬಳಗ ಒದಗಿಸಿದ ದೇಶೀ ತರಕಾರಿ ಬೀಜಗಳ ಬಿತ್ತನೆ ಮಾಡಲಾಯಿತು.
ಬಿತ್ತನೆ ಪ್ರಕ್ರಿಯೆ ಸಮಯದಲ್ಲಿ, ಸಾವಯವ ಕೃಷಿಯ ಅಗತ್ಯತೆ ಮತ್ತು ದೇಶೀ ಜೋಳದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ಡಾ.ಗಜಾನಂದ ಸೊಗಲನ್ನವರ ಹವ್ಯಾಸಿ ಕೃಷಿ ಬರಹಗಾರ ವಿನೋದ ಪಾಟೀಲ ,ಎ ಎಸ್ ಪೂಜಾರ,ಮಹೇಶಕುಮಾರ,ಸಿ ಬಿ ತುರಮರಿ,ಗೀತಾ ಜಾಧವ,ಮಂಜುಳಾ ಕೊಂಡಿ,ಮಂಜುಳಾ ಮಡ್ಲಿಇಕೋ ಕ್ಲಬ್ ನೋಡಲ್ ರತ್ನಾ ಜೋಡಗಿ ಹಾಗೂ ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಪರಿಚಯವನ್ನು ಪ್ರಾಯೋಗಿಕವಾಗಿಮಾಡಿಕೊಡುವುದರೊಂದಿಗೆ, ಕೃಷಿ ಕ್ಷೇತ್ರದ ವೈಭವವನ್ನು ಅರಿಯಲು ಪ್ರೇರಣೆ ನೀಡಿತು.