ಹೊಸಕಾದರವಳ್ಳಿ: ಅಡುಗೆ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಇಂದು ಎಮ್.ಕೆ. ಹುಬ್ಬಳ್ಳಿ ಮತ್ತು ಹೊಸಕಾದರವಳ್ಳಿ ಕ್ಲಸ್ಟರ್‌ಗಳ ಶಾಲಾ ಅಡುಗೆ ಸಿಬ್ಬಂದಿಗೆ ಹೊಸ ಕಾದರವಳ್ಳಿ ಸಿಆರ್‌ಸಿ ಕೇಂದ್ರದಲ್ಲಿ ಒಂದು ದಿನದ ತರಬೇತಿಯನ್ನು ಆಯೋಜಿಸಲಾಗಿತ್ತು.
ಈ ತರಬೇತಿಯು ಆಹಾರ ಸುರಕ್ಷತೆ, ಮಿತವ್ಯಯ, ಮತ್ತು ಸ್ವಚ್ಛತೆ ಸೇರಿದಂತೆ ಅಡುಗೆ ಸಂಬಂಧಿತ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ನೀಡುವ ಉದ್ದೇಶವನ್ನು ಹೊಂದಿತ್ತು. ತರಬೇತಿ ಉದ್ಘಾಟಿಸಿ ಪಿಎಂ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ಮಾತನಾಡಿ, ಆಹಾರ ಸುರಕ್ಷತೆಯ ಮಹತ್ವ, ಸರಿಯಾದ ಕಾರ್ಯನಿರ್ವಹಣೆ, ಮತ್ತು ಸ್ವಚ್ಛತೆಯ ಅವಶ್ಯಕತೆಯ ಕುರಿತು ಮಾರ್ಗದರ್ಶನ ಮಾಡಿದರು.
ಸುರಕ್ಷತೆ ಕುರಿತು ಮಾಹಿತಿ:ಇಂಡೇನ್ ಗ್ಯಾಸ ಇಲಾಖೆಯ ಸಂತೋಷ ಅವರು ಗ್ಯಾಸದ ಬಳಕೆ ಮತ್ತು ಅದರ ಸುರಕ್ಷತೆ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಆರೋಗ್ಯ ಜಾಗೃತಿಯ ಬಗ್ಗೆ:ಆರೋಗ್ಯ ಕಾರ್ಯಕರ್ತರು ತರಬೇತಿಯಲ್ಲಿ ಆರೋಗ್ಯ ಮತ್ತು ಪೌಷ್ಟಿಕತೆ ಕುರಿತು ಮಾರ್ಗದರ್ಶನ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಆರ್.ಪಿ. ವಿನಾಯಕ ಲಕ್ಕನಗೌಡರ್ • ಸಿ.ಆರ್.ಪಿ. ವಿನೋದ ಪಾಟೀಲ, ವಸೀಮಾ ದಡವಾಡ, ಶಾಲೆಯ ಮುಖ್ಯಶಿಕ್ಷಕರಾದ ಆರ್.ಎಸ್. ಹೊಳಿಈ ತರಬೇತಿಯಲ್ಲಿ ಎರಡು ಕ್ಲಸ್ಟರ್‌ಗಳ ಅಡುಗೆ ಸಿಬ್ಬಂದಿಗಳು ಭಾಗವಹಿಸಿದರು.
ಈ ಕಾರ್ಯಕ್ರಮವು ಸೊಗಸಾಗಿ ನಡೆಯಿತು ಮತ್ತು ಭಾಗವಹಿಸಿದವರಲ್ಲಿ ಉತ್ತಮ ಚರ್ಚೆ ಮತ್ತು ಜ್ಞಾನ ವೃತ್ತಿಯ ವೃದ್ಧಿಯನ್ನು ಉಂಟುಮಾಡಿತು.