
ಚನ್ನಮ್ಮನ ಕಿತ್ತೂರು, ನವೆಂಬರ್ 03: ಸಮೀಪದ ಎಂ. ಕೆ. ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯ ಪ್ರಸಕ್ತ ವರ್ಷದ ಬಾಯ್ಲರ್ ದೀಪನ ಹಾಗೂ ಕೇನ ಕ್ಯಾರೀಯರ ಪೂಜಾ ಕಾರ್ಯಕ್ರಮ ಇವತ್ತು ನೆರೆವೇರಿತು.
ಕಿತ್ತೂರು ರಾಜಗುರು ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು, ಕಾದರವಳ್ಳಿ ಶ್ರೀರಾಮ ಮಂದಿರದ ಗುರುಪುತ್ರ ಮಹಾರಾಜರು ತಮ್ಮ ಅಮೃತ ಹಸ್ತದಿಂದ ಪ್ರದೀಪನ ಕಾರ್ಯ ಮತ್ತು ಕೇನ ಕ್ಯಾರೀಯರ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಕಾರ್ಖಾನೆಯ ಉಪಾಧ್ಯಕ್ಷೆ ಲಕ್ಷ್ಮೀ ಅರಳಿಕಟ್ಟಿ, ವ್ಯವಸ್ಥಾಪಕ ನಿರ್ದೇಶಕ ಮೋಹನ್ ಹಿರೇಮಠ, ಕಾಂಗ್ರೆಸ್ ಮುಖಂಡ ನಾನಾಸಾಹೇಬ್ ಪಾಟೀಲ್, ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿಗಳು, ಕಾರ್ಮಿಕರು, ರೈತರು ಉಪಸ್ಥಿತರಿದ್ದರು.