Home ಮನರಂಜನೆ ಇಂದು ಪುಟ್ಟಣ್ಣ ಕಣಗಾಲ್‌ 91ನೇ ಹುಟ್ಟುಹಬ್ಬ; ಚಲನಚಿತ್ರ ನಿರ್ದೇಶಕರ ಸಂಘ ಬರ್ತ್ಡೇ ಸೆಲೆಬ್ರೇಶನ್!

ಇಂದು ಪುಟ್ಟಣ್ಣ ಕಣಗಾಲ್‌ 91ನೇ ಹುಟ್ಟುಹಬ್ಬ; ಚಲನಚಿತ್ರ ನಿರ್ದೇಶಕರ ಸಂಘ ಬರ್ತ್ಡೇ ಸೆಲೆಬ್ರೇಶನ್!

0
ಇಂದು ಪುಟ್ಟಣ್ಣ ಕಣಗಾಲ್‌  91ನೇ ಹುಟ್ಟುಹಬ್ಬ; ಚಲನಚಿತ್ರ ನಿರ್ದೇಶಕರ ಸಂಘ ಬರ್ತ್ಡೇ ಸೆಲೆಬ್ರೇಶನ್!

ಬೆಂಗಳೂರು, ಡಿಸೆಂಬರ್ 01: ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಬದುಕಿರುತ್ತಿದ್ದರೆ ಡಿಸೆಂಬರ್‌ 1ಕ್ಕೆ ಅವರಿಗೆ 91 ವರ್ಷ ತುಂಬುತ್ತಿತ್ತು. ಹೌದು, ಇಂದು ಪುಟ್ಟಣ್ಣ ಕಣಗಾಲ್‌ ಅವರ 91ನೇ ಹುಟ್ಟುಹಬ್ಬ.

ಪುಟ್ಟಣ್ಣ ಕಣಗಾಲ್‌ ಚಿತ್ರರಸಿಕರನ್ನು ಅಗಲಿ 38 ವರ್ಷಗಳಾಗಿವೆ. 1985ರ ಜೂನ್‌ ಐದರಂದು ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು

ಪ್ರೇಕ್ಷಕರು ಪುಟ್ಟಣ್ಣ ಕಣಗಾಲ್‌ ಅವರು ನಿರ್ದೇಶಿಸಿರುವ ಚಿತ್ರಗಳ, ತೆರೆಗೆ ತಂದ ಪಾತ್ರಗಳ, ಬೆಳಕಿಗೆ ತಂದ ಕಲಾವಿದರ, ಇಂದಿಗೂ ಜನಪ್ರಿಯವಾಗಿರುವ ಹಾಡುಗಳ ಬಗ್ಗೆ ಯಾವಾಗಲೂ ಮೆಲುಕು ಹಾಕುತ್ತಲೇ ಇರುತ್ತಾರೆ. ಪುಟ್ಟಣ್ಣ ಅವರ ಹುಟ್ಟುಹಬ್ಬವನ್ನು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇಂದು ಆಚರಿಸುತ್ತಿದೆ.

LEAVE A REPLY

Please enter your comment!
Please enter your name here