
ಸುವರ್ಣ ಸಮಾಚಾರ
ಚನ್ನಮ್ಮನ ಕಿತ್ತೂರು: ರಾಜ್ಯ ಸರ್ಕಾರಿ ನೌಕರ ಸಂಘ ಚನ್ನಮ್ಮನ ಕಿತ್ತೂರು ತಾಲೂಕಾ ಶಾಖೆಯ 2024- 29 ನೇ ಅವಧಿಯ ಆಧೀನ ಶಾಖೆಗಳ ಚುನಾವಣಾ ಪ್ರಕ್ರೀಯೆ ಪ್ರಾರಂಭಗೊಂಡಿದ್ದು ಅ 28 ರಂದು ಚುನಾವಣೆ ನಡೆಯಲಿದೆ.
ಅ 9 ರಿಂದ ಅ 18 ರ ಸಂಜೆ 5 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶ ಇರುತ್ತದೆ. ಅ 19 ನಾಮಪತ್ರ ಪರಿಶೀಲನೆ ಮಾಡಿ ಅಂತಿಮ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು. ಅ 21 ಸಂಜೆ 4.30 ಗಂಟೆಯವರೆಗೆ ನಾಮಪತ್ರ ವಾಪಸ್ಸ ಪಡೆಯಲು ಅವಕಾಶ ಇರುತ್ತದೆ.
ಅ 28 ರಂದು ಚುನಾವಣೆ ಪ್ರಕ್ರೀಯೆ ಮುಕ್ತಾಯಗೊಂಡ ನಂತರ ಎಣಿಕೆ ಕಾರ್ಯ ಆರಂಭವಾಗಲಿದ್ದು ಅದೇ ದಿನ ಪಲಿತಾಂಶ ಪ್ರಕಟಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಚುನಾವಣಾ ಅಧಿಕಾರಿಗಳು ಹಾಗೂ ನಿವೃತ್ತ ಶಿಕ್ಷಕರಾದ ಡಿ. ಆರ್. ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದರು.