ಸುವರ್ಣ ಸಮಾಚಾರ
ಚನ್ನಮ್ಮನ ಕಿತ್ತೂರು: ಭಾರತದ ಸಂವಿಧಾನ ವೈವಿಧ್ಯಗಳ ಸಂಗಮವಾಗಿದೆ. ನಮ್ಮ ಸಂವಿಧಾನವನ್ನು ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ಎಂದು ಪರಿಗಣಿಸಲಾಗಿದೆ ಎಂದು ಚನ್ನಮ್ಮ ಕಿತ್ತೂರು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ ಹೇಳಿದರು.
ಸುವರ್ಣ ಸಮಾಚಾರ
ತಾಲೂಕಿನ ಅವರಾದಿ ಗ್ರಾಮದ ಅಮೃತ ಸರೋವರ ದಡದಲ್ಲಿ ಇಂದು 75 ನೇ ವರ್ಷದ ಸಂವಿಧಾನ ದಿನಾಚರಣೆಯ ಅಂಗವಾಗಿ ಸಂವಿಧಾನ ಪೀಠಿಕೆ ಭೋದಿಸಿ ಮಾತನಾಡಿದರು.
ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ ಎಲ್ಲಾ ಕಾನೂನಿಗಿಂತ ಸಂವಿಧಾನವೇ ಮಿಗಿಲು. ಹೀಗಾಗಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ. ಎಂದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಮಹಮ್ಮದ್ ಗೌಸ್ ರಿಷಲ್ದಾರ, ಸುರೇಶ್ ನಾಗೋಜಿ, ಐಇಸಿ ಸಂಯೋಜಕಿ ಎಸ್ ಬಿ ಜವಳಿ, ಗ್ರಾಮ ಪಂಚಾಯತ ಸದಸ್ಯರಾದ ಸರೋಜಾ ತಳವಾರ, ಮುಶವ್ವ ಕರವೀನ , ಶಾಲಾ ಮುಖ್ಯ ಶಿಕ್ಷಕರು ದಿನ್ನಿಮನಿ, ಕಾರ್ಯದರ್ಶಿ ಗುರುಪ್ರಕಾಶ ಬಸ್ಸಾಪುರ, ಗ್ರಾಪಂ ಸಿಬ್ಬಂದಿಗಳಾದ ರೂಪಾ ಹುಲಮನಿ, ಈರಪ್ಪ ಸರದಾರ, ಕೃಷ್ಣ ಕಡಕೋಳ, ದಿನಕರ ಗಿರಿ, ಶಂಕರ ಪರವಣ್ಣವರ, ಶಾಲಾ ಮಕ್ಕಳು ಹಾಗೂ ನರೇಗಾ ಕೂಲಿಕಾರ್ಮಿಕರು ಹಾಜರಿದ್ದರು.