ಬೆಳಗಾವಿ,ಡಿಸೆಂಬರ್ 19: ಕೇಂದ್ರ ಸಚಿವ ಅಮಿತ ಶಾ ಅವರು ನೆನ್ನಿಯಷ್ಟೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಮಾತನಾಡಿರುವ ವಿವಾದಾತ್ಮಕ ಹೇಳಿಕೆ ಸಖತ್ ಸುದ್ದಿಯಾಗಿದೆ.
ಇದೀಗ ಇದೇ ವಿವಾದ ಬೆಳಗಾವಿ ಅಧಿವೇಶನದಲ್ಲೂ ಪ್ರತಿಧ್ವನಿಸಿದ್ದು ಆಡಳಿತ ಪಕ್ಷದ ಸದಸ್ಯರು ಅಂಬೇಡ್ಕರ್ ಭಾವಚಿತ್ರ ಹಿಡಿದು ಕೇಂದ್ರ ಸಚಿವರ ಹೇಳಿಕೆಯನ್ನು ಖಂಡಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಮಿತ ಶಾ ಅವರು ಹೇಳಿಕೆ ಸಮರ್ಥನೆಗೆ ಮುಂದಾದಾಗ ಸದನದಲ್ಲಿ ಪರಸ್ಪರ ವಾಗ್ವಾದ ಶುರುವಾಯಿತು ಆಡಳಿತ ಪಕ್ಷದ ಸದಸ್ಯರು ಅಂಬೇಡ್ಕರ್ ಭಾವಚಿತ್ರವನ್ನು ಜೋಡಿಸಿಟ್ಟಿರುವುದು ಗಮನ ಸೆಳೆಯಿತು.
ಇವತ್ತಿನ ಸದನದಲ್ಲಿ ಅಂಬೇಡ್ಕರ್ ಪ್ರಭಾವಳಿ ಎದ್ದು ಕಾಣಿಸಿದ್ದು ಈ ಸಾಲಿನ ಅಧಿವೇಶನದ ಅತ್ಯಂತ ಆಕರ್ಷಕ ಸಂಗತಿಯಾಗಿದ್ದು ವಿಶೇಷ.